ಕಾಸರಗೋಡು : "ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ವಾಮನ್ ರಾವ್ ಬೇಕಲ್ " ಎಂಬ ಕೃತಿಯನ್ನು ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಎಚ್ ಆರ್ ಶಶಿಧರ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಸಾಹಿತಿ ವಿರಾಜ್ ಅಡೂರ್ ರಚಿಸಿದ ಈ ಕೃತಿಯನ್ನು ಡಾ. ಮೊಗಸಾಲೆಯವರ ಕಾಂತಾವರ ಕನ್ನಡ ಸಂಘವು "ನಾಡಿಗೆ ನಮಸ್ಕಾರ "ಎಂಬ ಪುಸ್ತಕ ಮಾಲೆಯಲ್ಲಿ ಬಿಡುಗಡೆಗೊಳಿಸಿತ್ತು. ಕಾರ್ಯಕ್ರಮದಲ್ಲಿ ವಿಶ್ವ ರಾಮಕ್ಷತ್ರಿಯ ಮಹಾಸಂಘ ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರ್ವೆಗಾರ್ ಹೆಬ್ರಿ, ಉಪಾಧ್ಯಕ್ಷರಾದ ನಾಗರಾಜ್ ಕಾಮಧೇನು, ಪ್ರಧಾನ ಕಾರ್ಯದರ್ಶಿ ಅಡ್ವೋ. ಶ್ರೀಧರ್ ಪಿ. ಎಸ್, ಕಾರ್ಯದರ್ಶಿ ರಶ್ಮಿರಾಜ್, ಷಣ್ಮುಖ ಬಿ. ಆರ್, ಡಿ. ಸತೀಶ್, ಗಣಪತಿ ಹೋಬಳಿದಾರ್, ಕೋಶಾಧಿಕಾರಿ ಯು. ಕರುಣಾಕರ, ಪದಾಧಿಕಾರಿಗಳಾದ ಮಂಜುನಾಥ್ ಏನ್, ಅನಿಲ್ ಕುಮಾರ್, ಪದ್ಮನಾಭ ಕೊತ್ವಲ್, ಗಣಪತಿ ಏನ್ ಶೇರುಗಾರ, ಹೂವಯ್ಯ ಶೇರುಗಾರ, ಜಿ. ಆರ್. ಪ್ರಕಾಶ್, ಎಚ್ ಶ್ರೀನಿವಾಸ, ಅಶೋಕ್ ಬೆಟ್ಟಿನ್, ಡಾ. ರಾಜೇಂದ್ರ, ಶಂಕರ್ ಕುಂದಾಪುರ, ಸಂತೋಷ್ ಬಲ್ಕೂರು, ಜೆ. ಸಂತೋಷ್, ನಾಗರಾಜ್ ಮದ್ದೋಡಿ, ನಾಗೇಶ್ ಕೆ. ಜೆ. ಸತೀಶ್ ಕಾವೇರಿ ಬಿ. ನಾಗರಾಜ್ ನಾಯ್ಕ್, ಶ್ರೀಮತಿ ಸುಮಿತ್ರಾ, ಉಪಸ್ಥಿತರಿದ್ದರು. ಅಡ್ವೋ. ಶ್ರೀಧರ್ ಪಿ. ಎಸ್ ಸ್ವಾಗತಿಸಿ, ಶ್ರೀನಿವಾಸ್ ಹೆಬ್ರಿ ವಂದಿಸಿ, ರಶ್ಮಿ ರಾಜ್ ನಿರೂಪಿಸಿದರು.

0 Comments