Ticker

6/recent/ticker-posts

Ad Code

ಬಣ್ಪುತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 39ನೇ ವಾರ್ಷಿಕೋತ್ಸವ ಯಶಸ್ವಿ ಸಂಪನ್ನ

 

ಪೆರ್ಲ: ಬಣ್ಪುತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 39ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಬೆಳಿಗ್ಗೆ  ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ, ಬಣ್ಪುತ್ತಡ್ಕ, ಮಾತೃಶ್ರೀ ಭಜನಾ ಸಂಘ, ಕೂಡ್ಲು ಇವರಿಂದ ಭಜನೆ ನಡೆಯಿತು. ಬಳಿಕ  ಶ್ರೀ ಸತ್ಯನಾರಾಯಣ ಪೂಜೆ,  ರಾಧಾಕೃಷ್ಣ ಪಳ್ಳಕಾನ ಮತ್ತು ಶ್ರೀ ರಾಮಚಂದ್ರ ಭಟ್ ಮತ್ತು ಬಳಗ ಅವರಿಂದ ಭಕ್ತಿಸಂಗೀತ, ಮಧ್ಯಾಹ್ನ ಮಹಾಪೂಜೆ ಜರಗಿತು.  ಮಧ್ಯಾಹ್ನ ಬಳಿಕ ಗೌರವ್ ಡಿ. ಶೆಟ್ಟಿ ಮತ್ತು ಬಳಗ, ಅಡ್ಯಾರ್ - ಮಂಗಳೂರು ಇವರಿಂದ ಭಜನಾ ಸಂಕೀರ್ತನೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ, ಅಗಲ್ಪಾಡಿ ಅವರಿಂದ ಭಜನೆ,  ಮನು ಪಣಿಕ್ಕರ್ ಮತ್ತು ಸಂಘ ಬೆದ್ರಡಿ-ಅಗಲ್ಪಾಡಿ, ಇವರಿಂದ ತಾಯಂಬಕಂ ಶ್ರೀ ದುರ್ಗಾ ಬಂಟರ ಮಹಿಳಾ ಸಂಘ, ಪೆರ್ಲ ಇವರಿಂದ ಭಜನೆ, ರಾತ್ರಿ ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಶಾಲೆಯ ಪರಿಸರದಿಂದ ಮಂದಿರಕ್ಕೆ ಉಲ್ಪೆ ಮೆರವಣಿಗೆ ಸಾಗಿ ಬಂತು. ವಿಶೇಷ ಆಕರ್ಷಣೆಯಾಗಿ ಶ್ರೀ ಶಾಸ್ತಾ ನಾಸಿಕ್ ಬ್ಯಾಂಡ್, ಬಣ್ಪುತ್ತಡ್ಕ ಇವರಿಂದ ನಾಸಿಕ್  ಬ್ಯಾಂಡ್ ವಾದನ ಜರಗಿತು. ಬಳಿಕ  ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಬಣ್ಪುತ್ತಡ್ಕ ಮತ್ತು ಸ್ವಾಮಿಗಳಿಂದ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಕಳುವಾರು, ಬಾಳ, ಮಂಗಳೂರು-ಇವರಿಂದ   ರವಿಕುಮಾ‌ರ್ ಸುರತ್ಕಲ್ ರಚನೆಯ  'ನಾಗ ತಂಬಿಲ' ಯಕ್ಷಗಾನ ಬಯಲಾಟ  ಪ್ರದರ್ಶನದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.

Post a Comment

0 Comments