Ticker

6/recent/ticker-posts

Ad Code

ಪ್ರಧಾನಿ ಮೋದಿಗಾಗಿ ಕಾಸರಗೋಡಿನಲ್ಲಿ ನಮೋ ಫ್ಯಾನ್ಸ್ ನಿಂದ ಭಜನಾ ಸಂಕೀರ್ತನೆ

 

ಕಾಸರಗೋಡು : ನಗರದ ನಮೋ ಫ್ಯಾನ್ಸ್ ಮಲ್ಲಿಕಾರ್ಜುನ ಇದರ ವತಿಯಿಂದ ವರ್ಷಂಪ್ರತಿ ಜರಗುವ ಮಂಡಲ ಪೂಜೆ  ಶ್ರೀ ಧರ್ಮ ಶಾಸ್ತಾ ಭಜನಾ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಭಜನಾ ಸಂಕೀರ್ತನೆ, ನೂರಕ್ಕೂ ಅಧಿಕ ವಿಶೇಷ ಮಂಡಲಪೂಜೆ ನಡೆಯಿತು.  ಎಲ್ಲಾ ಅಯ್ಯಪ್ಪ ಭಕ್ತರಿಗೂ ಭಗವದ್ಭಕ್ತರಿಗೂ ಉಪಹಾರ ನೀಡಲಾಯಿತು. ಈ ಪುಣ್ಯ ಕಾರ್ಯದಲ್ಲಿ ನಮೋ ಫ್ಯಾನ್ಸ್ ನ ಅಧ್ಯಕ್ಷ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಮಾಜಿ ಸದಸ್ಯೆ ಶ್ರೀ ಲತಾ ಟೀಚರ್, ನಗರಸಭಾ ನೂತನ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಮಂದಿರದ ಅಧ್ಯಕ್ಷರಾದ ಸುರೇಶ್ (ಕೃಷ್ಣ ಹಾರ್ಡ್ ವೇರ್), ನಮೋ ಫ್ಯಾನ್ಸ್ ಪ್ರಮುಖರಾದ ಶಂಕರನಾರಾಯಣ ಹೊಳ್ಳ, ಶೀನಿವಾಸ ಹೊಳ್ಳ, ಪ್ರಮೋದ್ ಕುಮಾರ್, ಕಿಶೋರ್ ಕುಮಾರ್, ಪುರಂದರ ಶೆಟ್ಟಿ, ನಾಮದೇವ ಪೈ, ಶಿವಶಂಕರ ಅಡಿಗ, ನವೀನ್ ಅಶೋಕ ನಗರ, ರವಿ ಕೇಸರಿ, ಪ್ರೆಮ್‌ಜಿತ್, ತುಕರಾಮ ಕೆರೆಮನೆ, ರಾಮಕೃಷ್ಣ ರಾವ್, ತಿರುಮಲೇಶ್ ಹೊಳ್ಳ, ಶೇಷಾದ್ರಿ ಹೊಳ್ಳ, ವಸಂತ್ ಕೆರೆಮನೆ, ಮಾತೃ ಮಮಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

ಭಾರತದ‌ ಅಭಿಮಾನದ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಥಮ ಬಾರಿ ಪ್ರಮಾಣ ವಚನ ಮಾಡಿದ ಪ್ರತೀ ತಿಂಗಳ 26 ರಂದು ಮತ್ತು ದ್ವಿತೀಯ ಬಾರಿ ತಿಂಗಳ 30 ರಂದು ಹಾಗೂ ತೃತೀಯ ಬಾರಿ 9 ನೇ ತಾರೀಕಿನಂದು ನಿರಂತರವಾಗಿ 11 ವರ್ಷಗಳ ಕಾಲ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಭಜನೆ ಮತ್ತು ವಿಶೇಷ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

Post a Comment

0 Comments