ಕಾಸರಗೋಡು : ಕಾಞಂಗಾಡ್ ಸಮೀಪದ ಕಲ್ಲಾರ್ ಕೊಟ್ಟಕುನ್ನು ಎಂಬಲ್ಲಿ ಜನ ವಸತಿ ಇರುವ ಪ್ರದೇಶದಲ್ಲಿ ಚಿರತೆಯ ಶವ ಪತ್ತೆಯಾಗಿದ್ದು ಜನತೆಯನ್ನು ಆತಂಕಕ್ಕೀಡಾಗಿಸಿದೆ. ಶಾಜಿ ಅವರ ಹೊಲದಲ್ಲಿ ಚಿರತೆಯ ಶವ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಚಿರತೆ ಹಿಂಡು ನಾಡಿಗಿಳಿದಿವೆಯೇ ಎಂದು ಜನ ಭೀತಿ ಪಡುವಂತಾಗಿದೆ. ಈ ಬಗ್ಗೆ ಮಾಹಿತಿ ಅರಿತ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿದೆ. ಕಣ್ಣೂರಿನಿಂದ ಪಶುವೈದ್ಯರು ಬಂದು ಶವವನ್ನು ಪರೀಕ್ಷಿಸಿದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ಮೃತದೇಹವನ್ನು ವೀಕ್ಷಿಸಲು ಸಮೀಪ ಪ್ರದೇಶವಾಸಿಗಳು ಆಗಮಿಸುತ್ತಿದ್ದಾರೆ.

0 Comments