Ticker

6/recent/ticker-posts

Ad Code

ಮಂಗಳೂರಿನಲ್ಲಿ 'ಕರಾವಳಿ ಕವನಗಳು' 300 ಕವಿಗಳ 300 ರಚನೆಗಳು ಪುಸ್ತಕ ಬಿಡುಗಡೆ

 

ಮಂಗಳೂರು : ಬಹು ಓದು ಬಳಗ  ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್  ಮಂಗಳೂರು ಆಶ್ರಯದಲ್ಲಿ 'ಕರಾವಳಿ ಕವನಗಳು' 300 ಕವಿಗಳ 300 ರಚನೆಗಳು  ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ರವಿವಾರ ಜರಗಿತು.

ಮೈಸೂರು ಮಾನಸ ಗಂಗೋತ್ರಿ ಶಾಸ್ತ್ರೀಯ ಅಧ್ಯಯನ ಕೇಂದ್ರ ಸಂಶೋಧಕರಾದ ಡಾ. ಚಲಪತಿ ಆರ್ ಪುಸ್ತಕ ಬಿಡುಗಡೆ ಮಾಡಿದರು.  ಹಿರಿಯ ಕವಿ, ಲೇಖಕ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಕಾಸರಗೋಡು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಅಜ್ಜರಕಾಡು ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ ಅವರು ಪುಸ್ತಕ ವಿಮರ್ಶೆಯನ್ನು ನಡೆಸಿಕೊಟ್ಟರು. ಸಾಹಿತಿ, ವಿಮರ್ಶಕ  ಅರವಿಂದ ಚೊಕ್ಕಾಡಿ ಅವರು ಮುಖ್ಯ ಅತಿಥಿಗಳಾಗಿದ್ದರು. ಬಹು ಓದು ಬಳಗದ ಸಂಚಾಲಕರಾದ  ಡಾ. ಸತೀಶ್ ಚಿತ್ರಾಪು, ಉಪಸ್ಥಿತರಿದ್ದರು. ಪ್ರಕಾಶಕರಾದ  ಕಲ್ಲೂರು ನಾಗೇಶ್  ಸ್ವಾಗತಿಸಿ  ಡಾ. ರಾಘವೇಂದ್ರ ಜಿಗಳೂರ ವಂದಿಸಿದರು. ಡಾ. ಜ್ಯೋತಿಪ್ರಿಯಾ ನಿರೂಪಿಸಿದರು. ಡಾ. ಉಷಾ ಪ್ರಕಾಶ್, ಡಾ. ರಾಘವೇಂದ್ರ ಜಿಗಳೂರರ  ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ಕರಾವಳಿ ಕವನಗಳಲ್ಲಿ 2001-2025ರ ಕಾಲಘಟ್ಟದ ಕವನಗಳನ್ನು ಸಂಕಲಿಸಲಾಗಿದೆ.

ಪೂರ್ವಾಹ್ನ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಇಲ್ಲಿನ  ವಿದ್ಯಾರ್ಥಿನಿ ಕು. ದಿಯಾ ಉದಯ್ ಡಿ. ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ ನಡೆಯಿತು.

Post a Comment

0 Comments