Ticker

6/recent/ticker-posts

Ad Code

ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವ ಸಂಪನ್ನ

  ಕಾಸರಗೋಡು :  ಜಿಲ್ಲೆಯ  ಇತಿಹಾಸ ಪ್ರಸಿದ್ಧವಾದ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಐತಿಹಾಸಿಕ ಕಾರ್ಣಿಕವುಳ್ಳ ರಾಮಕ್ಷತ್ರಿಯ- ರಾಮರಾಜ ಕ್ಷತ್ರಿಯ - ಕೋಟೆಯಾರ್ ಸಮಾಜದ ಪ್ರತಿಷ್ಠಿತ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಬ್ರಹ್ಮಶ್ರೀ ಅರವತ್ ಪದ್ಮನಾಭ  ತಂತ್ರಿಗಳ ಉಪಸ್ಥಿತಿಯಲ್ಲಿ  ಕೀಕಾoಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ ಚಂದ್ರಗಿರಿ ಅವಿನಾಶ್ ಭಟ್ ರವರ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

  ಸರ್ವ ಭಕ್ತರ ಕರೆಗೆ ಒಗೊಟ್ಟು ಸರ್ವರ ಕಷ್ಟಗಳನ್ನು ಪರಿಹರಿಸುವ ಕುಲದೇವರಾದ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರು, ಕಾರಣಿಕದ ಕೊಪ್ಪಲುಗುಳಿಗ ಎಂದೇ ಪ್ರಸಿದ್ಧವಾದ ಕೊಪ್ಪಲು ಕಾರ್ಯಕಾರ ವಿಷ್ಣುಮೂರ್ತಿ, ರಕ್ತೇಶ್ವರಿ, ಗುರು ಬ್ರಹ್ಮ, ಕುಲನಾಗ ಹಾಗೂ ಧೂಮಾವತಿ (ಧರ್ಮದೈವ) ಎಂಬೀ ಉಪದೇವತೆಗಳ ನೆಲೆವೀಡಾದ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದಲ್ಲಿ 2026 ಏಪ್ರಿಲ್ 3 ರಿಂದ 5 ರ ತನಕ 55ನೇ ಪ್ರತಿಷ್ಠಾ ಮಹೋತ್ಸವ -  ಪ್ರತಿಷ್ಠಾ  ವಾರ್ಷಿಕೋತ್ಸವದ ಅಂಗವಾಗಿ  ಕುಲ ಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅಂತರ ಪೌರೋಹಿತ್ಯದಲ್ಲಿ ಸ್ವಜಾತಿ ಬಾಂಧವರ ವಟುಗಳಿಗೆ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಮತ್ತು ಧರ್ಮದೈವಗಳ ಕೋಲವು ಯಶಸ್ವಿಯಾಗಿ ಜರಗಿತು.

ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದಲ್ಲಿ ಸರ್ವ ಸಮುದಾಯದವರು ಶ್ರದ್ಧಾ ಭಕ್ತಿಯಿಂದ  ಆರಾಧಿಸಿಕೊಂಡು ಬರುತ್ತಿರುವ ಕೊಪ್ಪಲು ಕಾರ್ಯಕಾರ ಎಂದೇ ಪ್ರಖ್ಯಾತವಾಗಿರುವ ಕೊಪ್ಪಲು ಗುಳಿಗನ ಕೋಲವು ಅತ್ಯಂತ ಕಾರ್ಣಿಕ ಪ್ರಸಿದ್ಧವಾಗಿದೆ. ಊರ ಪರವೂರ ಭಕ್ತರು ಕೇರಳ, ಕರ್ನಾಟಕ ಹಾಗೂ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕೊಪ್ಪಲು ಕಾರ್ಯಕಾರನ ದರ್ಶನಕ್ಕಾಗಿ, ಸರ್ವ ಇಷ್ಟಾರ್ಥ ಸಿದ್ಧಿಯನ್ನು ಪೂರೈಸುವುದಕ್ಕಾಗಿ ಕೊಪ್ಪಲು ಕಾರ್ಯಕಾರನನ್ನು ನೆನಪಿಸಿ ಆಗಮಿಸುತ್ತಾರೆ.

ಚಂದ್ರಗಿರಿ ಕೋಟೆ ಐತಿಹಾಸಿಕ, ಧಾರ್ಮಿಕ, ಚಾರಿತ್ರಿಕ ಪ್ರವಾಸ ಕೇಂದ್ರವಾಗಲಿದೆ ಎಂದು ಬೆಂಗಳೂರಿನ ದೇವನಹಳ್ಳಿಯ ಆಕಾಶ್ ವೈದ್ಯಕೀಯ ಮೆಡಿಕಲ್ ಕಾಲೇಜಿನ ಮೆಡಿಕಲ್ ಸುಪರಿoಟೆಂಡೆಂಟ್ ಡಾ. ಬ್ರಿಜೇಶ್ ಕೆ.ಅವರು ವಿದ್ವತ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

  ದೇವಳ ಸಮಿತಿಯ ಅಧ್ಯಕ್ಷ ಕೆ. ಲೋಕೇಶ್ ಕೊಪ್ಪಲು ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ನ ಪೊಲೀಸ್ ಇನ್ಸಪೆಕ್ಟರ್ ಪ್ರಮೋದ್ ಕುಮಾರ್ ಪಿ.,ಮಂಗಳೂರು ಅಬಕಾರಿ ಅಧೀಕ್ಷಕಿ ಶೋಭಾ ರಾಮಚಂದ್ರ, ಕೇರಳ ತೀಯಾ ಮಹಾಸಭಾದ ರಾಜ್ಯಾಧ್ಯಕ್ಷ ಗಣೇಶ ಆರಮoಗಾನ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇವಳ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ಕೊಪ್ಪಲು, ಉಪಾಧ್ಯಕ್ಷ ಕರ್ನಾಟಕ ಅಬಕಾರಿ ಇಲಾಖೆಯ ಜಿಲ್ಲಾ ಕಮಿಷನರ್ ಪ್ರಶಾಂತ ಕುಮಾರ್ ಕೊಪ್ಪಲು,ದೇವಳದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ಬೀರಿ ಕೋಟೆಕಾರ್,  ಭವಾನಿಶಂಕರ ತೋಟ ಬೀರಂತಬೈಲು, ದೇವಸ್ಥಾನದ ಅರ್ಚಕ ಸಿ.ಹೆಚ್. ದಯಾನಂದ ಕೊಪ್ಪಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾತಿ ಕೊಪ್ಪಲು ಹಾಗೂ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮದ ನಿರೂಪಕರಾಗಿದ್ದರು.

   ಕುಟುಂಬದಲ್ಲಿ 75 ವರ್ಷ ಪೂರೈಸಿದವರಿಗೆ ಸನ್ಮಾನ ಎಸ್. ಎಸ್. ಎಲ್. ಸಿ, ಪಿ. ಯು. ಸಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಗೌರವ ಡಾಕ್ಟರೇಟ್ ಪದವಿ ಪಡೆದವರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಸ್ಮರಣೆಕೆ, ಶಾಲು, ಫಲಪುಷ್ಪ ನಗದು ಗೌರವದೊಂದಿಗೆ ಅಭಿನಂದಿಸಲಾಯಿತು. ರಾಜ್ಯ, ರಾಷ್ಟ್ರೀಯ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ,ಚಲನಚಿತ್ರ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ದೇವಳದ ಅಭಿವೃದ್ಧಿಗಾಗಿ ದುಡಿದ ಹಲವು ಮಹನೀಯರನ್ನು ಸನ್ಮಾನಿಸಲಾಯಿತು.

  ಜಿಲ್ಲಾ ರಾಜ್ಯ ಮಟ್ಟದಲ್ಲಿ ಗೌರವ ಪುರಸ್ಕಾರ ಪಡೆದಿರುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು. ಮೂರು ದಿನಗಳ ಕಾಲ ಕಾಸರಗೋಡು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಭಜನಾ, ದಾಸಸoಕೀರ್ತನಾ ತಂಡಗಳಿಂದ ಭಜನಾ ಗಾಯನ ನಡೆಯಿತು. ಸಾಂಸ್ಕೃತಿಕ ಧಾರ್ಮಿಕ ಉತ್ಸವದಲ್ಲಿ  ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಇದರ  ಚಲನಚಿತ್ರ ನಟ ರಂಜನ್ ಕಾಸರಗೋಡು ಸಕ್ರಿಯವಾಗಿ ಪಾಲ್ಗೊಂಡಿದ್ದರು. 


                                                                          ಜಾಹೀರಾತು



Post a Comment

0 Comments