ಕುಂಬಳೆ : ಉಳುವಾರು ಸಮೀಪದ ಅಂಬಿಲಡ್ಕದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕುಂಬಳೆ ಪೊಲೀಸರು ಪೊಲೀಸರು ದಾಳಿ ನಡೆಸಿ 4 ಕೋಳಿ ಹಾಗೂ ಅಂಕ ನಿರತರಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಬಂಟ್ವಾಳದ ತಾಲೂಕಿನ ದಿನೇಶ್ ಕಲ್ಲಡ್ಕ (26), ಪುತ್ತೂರು ಸಮೀಪದ ಬಲ್ನಾಡು ಬಾಲಪ್ಪುಗೌಡ (40) ಮತ್ತು ಅಂಬಿಲಡ್ಕ ಹೌಸ್‌ನ ಉಜಾರ್ ಪಿ ದಿಲ್ದಿತ್ (31) ಎಂಬರನ್ನು ಕುಂಬಳೆ ಎಸ್‌ಐ ಕೆ. ಸನೀತ್ ಮತ್ತು ತಂಡ ಬಂಧಿಸಿದೆ.
ಸೋಮವಾರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. ಪೊಲೀಸರನ್ನು ನೋಡಿ, ಜಮಾಯಿಸಿದ್ದ ಸುಮಾರು ನೂರು ಜನರು ಚದುರಿ ಓಡಿಹೋದರು. ಆದರೆ, ಮೂವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಹೀರಾತು


0 Comments