ಕಾಸರಗೋಡು : ಪೊಯಿನಾಚಿಯ ಖಾಸಗಿ ಶಾಲಾ ಬಸ್ ಚಾಲಕನೊಬ್ಬ ತನ್ನ ಮನೆಯ ಏಣಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತರನ್ನು ಪರಂಬದ ದಿವಂಗತ ಕೃಷ್ಣನ್ ಅವರ ಪುತ್ರ ಸಿ. ರವಿ (51) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಮನೆಯ ಹಿಂಭಾಗದಲ್ಲಿರುವ ಕಬ್ಬಿಣದ ಏಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಪತ್ತೆಯಾಗಿದ್ದಾರೆ. ಅವರನ್ನು ತಕ್ಷಣ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಜೀವವನ್ನು ಉಳಿಸಲಾಗಲಿಲ್ಲ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಮೇಲ್ಪರಂಬ ಪೊಲೀಸರು ಅಸ್ವಾಭಾವಿಕ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಮೃತರು ತಾಯಿ ಅಮ್ಮಿನಿ. ಪತ್ನಿ ಪ್ರೇಮ. ಮಕ್ಕಳಾದ ಶರಣ್ ಕೃಷ್ಣನ್, ಶ್ರವಣ್ ಕೃಷ್ಣನ್ ಹಾಗೂ ಸಹೋದರಿಯರಾದ ಬೇಬಿ, ಲಲಿತಾ, ಮೀನಾಕ್ಷಿ ಎಂಬಿವರನ್ನಗಲಿದ್ದಾರೆ.
ಜಾಹೀರಾತು


0 Comments