Ticker

6/recent/ticker-posts

Ad Code

ಪ್ರಿಯತಮೆಗೆ ವಾಟ್ಸಪ್ ಸಂದೇಶ ಕಳುಹಿಸಿ ಯುವಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ

 

ಕಾಞಂಗಾಡು : ಗೆಳತಿಗೆ ವಾಟ್ಸಪ್  ಸಂದೇಶ ಕಳುಹಿಸಿದ ನಂತರ ಯುವಕನೋರ್ವ ರೈಲಿನ ಮುಂದೆ ಹಾರಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿಕೋತ್ ನಲ್ಲಿ ನಡೆದಿದೆ. ಮೃತ ವ್ಯಕ್ತಿ ಪಾಲಕ್ಕಾಡ್‌ನ ಶೊರ್ನೂರಿನ ಕೈಲಿಯಾಡ್‌ನ ನಿವಾಸಿ ಅಭಿಷೇಕ್ (19).ಎಂದು ಗುರುತಿಸಲಾಗಿದೆ.  ಮಾಣಿಕೋತ್ ರೈಲ್ವೆ ಹಳಿಗಳ ಮೇಲೆ ರೈಲು ಡಿಕ್ಕಿ ಹೊಡೆದು  ಅಭಿಷೇಕ್ ಮೃತಪಟ್ಟಿದ್ದಾನೆ. 

ಮಾಣಿಕೋತ್ ರೈಲ್ವೆ ಹಳಿಗಳ ಬಳಿ ನಿಂತಿರುವ ಫೋಟೋವನ್ನು ಅಭಿಷೇಕ್ ತನ್ನ ಗೆಳತಿಗೆ ಕಳುಹಿಸಿದ್ದ. ಆ ಹುಡುಗಿ ತಕ್ಷಣ ಈ ಫೋಟೋವನ್ನು ಯುವಕ ಕೆಲಸ ಮಾಡುವ ಸಂಸ್ಥೆಯ ಮಾಲೀಕರಿಗೆ ಕಳುಹಿಸಿದ್ದಾಳೆ. ಮಾಲೀಕರು ಫೋಟೋವನ್ನು ಮ್ಯಾನೇಜರ್‌ಗೆ ಕಳುಹಿಸಿದ್ದಾರೆ. ಮ್ಯಾನೇಜರ್ ಅಭಿಷೇಕ್ ಅವರ ಫೋನ್‌ಗೆ ಕರೆ ಮಾಡಿದಾಗ, ಪೊಲೀಸರು ಫೋನ್ ಎತ್ತಿಕೊಂಡು ಯುವಕ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಹೊಸದುರ್ಗ ಪೊಲೀಸರು ವಿಚಾರಣೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.


                                                                            

                                                                      
                                                                             ಜಾಹೀರಾತು



Post a Comment

0 Comments