Ticker

6/recent/ticker-posts

Ad Code

ಹಣ್ಣು ಕೀಳುತ್ತಿದ್ದ 4 ವರ್ಷದ ಮಗುವಿನ ಕೈಕಾಲು ಕಟ್ಟಿ ಥಳಿಸಿದ ಮಾಜಿ ಸೈನಿಕ

 

ಶಿಮ್ಲಾ : ಮಾಜಿ ಸೈನಿಕನೋರ್ವ  ತೋಟದಲ್ಲಿ ಪೇರಳೆ ಹಣ್ಣು ಕೀಳುತ್ತಿದ್ದ 4 ವರ್ಷದ ಮಗುವನ್ನು ಹಿಡಿದು ಕೈಕಾಲು ಕಟ್ಟಿಹಾಕಿ ಥಳಿಸಿದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ತನ್ನ ಮನೆಯ ಬಳಿಯ ಮರದಿಂದ  ಪೇರಳೆ ಹಣ್ಣುಗಳನ್ನುಕೀಳುವುದನ್ನು ಕಂಡು ಕೋಪೋದ್ರಿಕ್ತನಾಗಿ  ಆಕೆಯನ್ನು  ಮನೆಯೊಳಗೆ ಎಳೆದುಕೊಂಡು ಹೋಗಿ, ಸರಪಳಿಯಿಂದ  ಕಟ್ಟಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸುವ ವೇಳೆ ಮಗು  ʻನನ್ನನ್ನು ಕಾಪಾಡಿʼ ಎಂದು ಗೋಗರೆಯುವ  ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಷಯ ತಿಳಿದ ಕೆಲವು ಗ್ರಾಮಸ್ಥರು ಸ್ಥಳಕ್ಕೆ ಬಂದು ಮಗುವನ್ನು ರಕ್ಷಿಸಿದ್ದಾರೆ. 

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಂಡಿದ್ದಾರೆ. ತುರ್ತು ಸಹಾಯವಾಣಿ 112ಕ್ಕೆ ಕರೆ ಬಂದಿದ್ದು, ಉನಾ ಪೊಲೀಸರ ತಂಡ ಗ್ರಾಮಕ್ಕೆ ತೆರಳಿ ಮಗುವನ್ನು ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರಂಭಿಕ ತನಿಖೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments