Ticker

6/recent/ticker-posts

Ad Code

ಏ.9ರಿಂದ ಕುದ್ವ ಬಾರಿಕೆ ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವ

ಪೆರ್ಲ : ಕುದ್ವ ಬಾರಿಕೆ ನೂತನ ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಏ.9ರಿಂದ 12ರವರೆಗೆ ಜರುಗಲಿದೆ. ಏ.9ರಂದು ಸಂಜೆ 5.30ಕ್ಕೆ  ತಂತ್ರಿವರ್ಯರ ಆಗಮನ, ರಾತ್ರಿ 7ರಿಂದ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ.

 ಏ.10ರಂದು ಬೆಳಗ್ಗೆ 7ರಿಂದ ಗಣಪತಿ ಹವನ 11.41ರಿಂದ 12.45 ರ ಮಿಥುನ ಲಗ್ನ ಸುಮೂಹೂರ್ತದಲ್ಲಿ ಗೃಹ ಪ್ರವೇಶ, ಕೊರತಿ ದೈವದ ಪ್ರತಿಷ್ಠೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಏ.11ರಂದು ಬೆಳಗ್ಗೆ 9ಕ್ಕೆ ಗಣಪತಿ ಹವನ, ಮಧ್ಯಾಹ್ನ 12ರಿಂದ ಶ್ರೀ ವೆಂಕಟ್ರಮಣ ದೇವರ ಪೂಜೆ, 1ರಿಂದ ಅನ್ನಸಂತರ್ಪಣೆ, ರಾತ್ರಿ 7ರಿಂದ ಶ್ರೀ ದೈವಗಳಿಗೆ ತಂಬಿಲ, 8ರಿಂದ ಕೊರತಿ ದೈವದ ನೇಮ, 9ರಿಂದ ಅನ್ನಸಂತರ್ಪಣೆ, 11ರಿಂದ ಪಂಜುರ್ಲಿ ದೈವದ ನೇಮ, 12ರಂದು ಬೆಳಗ್ಗೆ 8ಕ್ಕೆ  ಧೂಮಾವತಿ ದೈವದ ನೇಮ, 10ರಿಂದ ಧರ್ಮ ದೈವ ಪರಪ್ಪಂಕರ್ಯತ್ತಾಯಿ ದೈವದ ನೇಮ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.

Post a Comment

0 Comments