Ticker

6/recent/ticker-posts

Ad Code

ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 

ಕಾಸರಗೋಡು : ಹರಿಪುರದ ಪುಲ್ಲೂರಿನಲ್ಲಿ ಯುವಕನೋರ್ವನ  ಮೃತದೇಹ  ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಹರಿಪುರಂ ಅಂಚೆ ಕಚೇರಿ ಬಳಿಯ ಸಬಿನ್ (32) ಎಂದು ಗುರುತಿಸಲಾಗಿದೆ. ಮಲಗುವ ಕೋಣೆಯ ಫ್ಯಾನ್‌ನಲ್ಲಿ  ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. 

ಕಣ್ಣನ್ ಮತ್ತು ಪುಷ್ಪಾ ದಂಪತಿಯ ಪುತ್ರ ಸಬಿನ್ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಬುಧವಾರ ರಾತ್ರಿಯವರೆಗೂ  ಚುನಾವಣಾ ಕರ್ತವ್ಯದಲ್ಲಿದ್ದ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅಂಬಲತ್ತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

0 Comments