ನೀರ್ಚಾಲ್ : ಮನೆ ಅಂಗಳದಲ್ಲಿ ಒಣಗಿಸಲು ಇಟ್ಟಿದ್ದ ಮೂರು ಚೀಲ ಅಡಕೆ ಕಳವುಗೊಂಡಿರುವ ಬಗ್ಗೆ ದೂರು ದಾಖಲಾಗಿದೆ. ನೀರ್ಚಾಲ್ ಸಮೀಪದ ಏಣಿಯರ್ಪ್‌ನ ಚೋಯಿ ಮಣಿಯಾಣಿ ಅವರ ಮನೆಯ ಬಳಿಯ ಟಾರ್ಪಾಲಿನ್ ಶೀಟ್‌ನಿಂದ ನಿರ್ಮಿಸಿದ್ದ ಡ್ರೈಯರ್‌ನಲ್ಲಿ ಅಡಕೆಯನ್ನು ಒಣಗಿಸಲು ಇಡಲಾಗಿತ್ತು.
ನಿನ್ನೆ ರಾತ್ರಿ 11 ಗಂಟೆಯಿಂದ ಇಂದು ಬೆಳಗ್ಗೆ 5 ಗಂಟೆಯೊಳಗೆ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ತನಿಖೆ ಮುಂದುವರಿದಿದೆ.

0 Comments