ಕುಂಬಳೆ : ಊಟ ಮಾಡುತ್ತಿದ್ದ ವೇಳೆ ಕುಸಿದುಬಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಕುಂಭಳೆ ಕುಂಟಗೇರಡ್ಕದ ಅಬ್ದುಲ್ಲಾ ಅವರ ಪುತ್ರ ಮುಬಾರಿಸ್ (18) ಭಾನುವಾರ ರಾತ್ರಿ ನಿಧನರಾದರು.
ಶನಿವಾರ ರಾತ್ರಿ ಊಟ ಮಾಡುತ್ತಿದ್ದ ವೇಳೆ ಮುಬಾರಿಸ್ ಏಕಾಏಕಿ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ಸ್ಥಿತಿ ಗಂಭೀರವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮಂಗಳೂರಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಮುಬಾರಿಸ್, ಎಂಎಸ್‌ಎಫ್ ಕುಂಬಳೆ ವಲಯ ಸಮಿತಿ ಸದಸ್ಯರಾಗಿದ್ದರು. ಅವರು ತಾಯಿ ಆಯಿಷಾ. ಸಹೋದರರಾದ ಮನಸ್, ಮಿರ್ಜಾ ಇವರನ್ನು ಅಗಲಿದ್ದಾರೆ.

0 Comments