ಕುಂಬಳೆ; ಗೃಹಿಣಿ ಹಾಗೂ ಆಕೆಯ ಏಳು ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಬ್ರಾಣ, ಕಿದೂರು, ಕುಂಟಗೇರಡ್ಕ ನಿವಾಸಿ ಕೆ.ಎಸ್. ಸುನಿಲ್ ಕುಮಾರ್ ಅವರ ಪತ್ನಿ ಬಿ. ರಮ್ಯ (29) ಹಾಗೂ ಮಗಳು ನಾಪತ್ತೆಯಾಗಿದ್ದಾರೆ.
ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಪತ್ನಿ ಮತ್ತು ಮಗಳು ಬಳಿಕ ಮನೆಗೆ ಮರಳಿಲ್ಲ ಎಂದು ಸುನಿಲ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

0 Comments