ದೇಲಂಪಾಡಿ : ದೇಲಂಪಾಡಿಯಲ್ಲಿ ಗೃಹಿಣಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇಲಂಪಾಡಿಯ ಸಜಿತ್ ಅವರ ಪತ್ನಿ ಸುಶೀಲ (44) ಮೃತಪಟ್ಟವರು.
ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಸುಶೀಲ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ನೆರೆ ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತರು ಕರ್ನಾಟಕದ ಬೆಟ್ಟಂಪಾಡಿ ಮೂಲದವರಾಗಿದ್ದು, ಏಕೈಕ ಪುತ್ರ ಸಂದೀಪ್, ಸಹೋದರಿಯರಾದ ಕಮಲ, ಸುಮಿತ್ರ ಹಾಗೂ ಸಹೋದರ ಮಾಧವ ಎಂಬಿವರನ್ನು ಅಗಲಿದ್ದಾರೆ.

0 Comments