Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೋಳಿಯ ತೂಕದ ವಿಚಾರದಲ್ಲಿ ಗಲಾಟೆ; ಜಾತಿ ಹೆಸರಿನಲ್ಲಿ ನಿಂದಿಸಿ ಯುವಕನಿಗೆ ಹಲ್ಲೆ, ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

ಬದಿಯಡ್ಕ : ಕೋಳಿಯ ತೂಕದ ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬದಿಯಡ್ಕ ಪೊಲೀಸರು ಚಿಕನ್ ಸ್ಟಾಲ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಉಕ್ಕಿನಡ್ಕ ಕಾರ್ಯಾಡ್ ಕೊರಗ ಉನ್ನತಿಯ ಶಿವಪ್ರಕಾಶ್ (20) ನೀಡಿದ ದೂರಿನ ಆಧಾರದ ಮೇಲೆ ಬದಿಯಡ್ಕದ ಶೆಟ್ಟಿ ಚಿಕನ್ ಸ್ಟಾಲ್ ಮಾಲೀಕ ರವೀಂದ್ರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೆರ್ಲದ ಐಡಿಯಲ್ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಶಿವಪ್ರಕಾಶ್ ಎಂದಿನಂತೆ ಕೋಳಿಗಳನ್ನು ಬದಿಯಡ್ಕದ ಸ್ಟಾಲ್‌ಗೆ ತಂದಿದ್ದರು. ಕೋಳಿಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಸ್ಟಾಲ್ ಮಾಲೀಕರನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಜಾತಿ ಹೆಸರಿನಿಂದ ನಿಂದಿಸಿ ತಡೆದು ನಿಲ್ಲಿಸಿ ಹಲ್ಲೆ ನಡೆಸಲಾಗಿದೆ ಹಾಗೂ ಕುತ್ತಿಗೆ ಹಿಡಿದ ಪರಿಣಾಮ ಉಗುರುಗಳಿಂದ ಗಾಯವಾಗಿದೆ ಎಂದು ಶಿವಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಶಿವಪ್ರಕಾಶ್ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್


https://www.instagram.com/visheshachannel/

https://www.facebook.com/profile.php?id=61572771802334

https://x.com/VisheshaC4541

https://www.linkedin.com/in/visheshachannel/

www.youtube.com/@VisheshaChannelofficial



#news #viral #blogger #viralnews #dailypost

Post a Comment

0 Comments

ಜಾಹೀರಾತು

Responsive Advertisement