ಬದಿಯಡ್ಕ : ಮಾರ್ಪನಡ್ಕ ಗುಳಿಗ ದೈವದ ಕಾಣಿಕೆ ಪೆಟ್ಟಿಗೆ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಚೆರ್ಕಳದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಫಾರೂಕ್ ಅಲಿಯಾಸ್ ‘ಸಿಂಗಲ್ ಫಾರೂಕ್’ (46) ಬಂಧಿತ ಆರೋಪಿ. ಬದಿಯಡ್ಕ ಇನ್ಸ್‌ಪೆಕ್ಟರ್ ಕೆ.ಆರ್. ಅನೂಪ್ ಕೃಷ್ಣ ಅವರ ನಿರ್ದೇಶನದಂತೆ ಎಸ್‌ಐ ಅಭಿಜಿತ್ ನೇತೃತ್ವದ ಪೊಲೀಸ್ ತಂಡ ಕಾಞಂಗಾಡಿನಲ್ಲಿ ಆರೋಪಿಯನ್ನು ಬಂಧಿಸಿದೆ.
ಜುಲೈ 29ರಂದು ಮುಂಜಾನೆ ಸುಮಾರು 5.30ರ ವೇಳೆಗೆ ಮಾರ್ಪನಡ್ಕ ಶ್ರೀಕೃಷ್ಣ ಭಜನಾ ಮಂದಿರದ ಹಿಂಭಾಗದಲ್ಲಿದ್ದ ಗುಳಿಗ ದೈವದ ಕಾಣಿಕೆ ಹುಂಡಿಯನ್ನು ಕಳವು ಮಾಡಲಾಗಿತ್ತು. ಪೆಟ್ಟಿಗೆಯಲ್ಲಿ ಸುಮಾರು 2,000 ರೂ. ನಗದು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆದೂರು ಪಯಂಗಡಿ ಹೌಸ್ ನಿವಾಸಿ ಸಬಿತ್‌ನನ್ನು ಈ ಹಿಂದೆ ಬಂಧಿಸಲಾಗಿತ್ತು. ಬಂಧಿತ ಫಾರೂಕ್ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಗೋಕುಲ್, ಶ್ರೀನೇಶ್ ಮತ್ತು ಶ್ರೀಜಿತ್ ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments