ಕಾಸರಗೋಡು : ಮದುವೆ ನಿಶ್ಚಯವಾಗಿದ್ದ ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೂಚಕ್ಕಾಡ್ ಕಿಝಕೇಕಕರ ನಿವಾಸಿ ಅನುಶ್ರೀ (25) ಮೃತಪಟ್ಟವರು. ಅವರ ವಿವಾಹ ಡಿ. 26ರಂದು ನಿಗದಿಯಾಗಿತ್ತು. ಅವರು ಕರ್ನಾಟಕದ ಹುಣಸೂರು ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದು, ಕಿಝಕೇಕಕರ ಕೆ. ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿಯಾಗಿದ್ದಾರೆ. ಚಂದ್ರನ್ ಅವರು ನೀಲೇಶ್ವರದಲ್ಲಿ ಮಲಬಾರ್ ಗ್ಯಾಸ್ ಡಿಸ್ಟ್ರಿಬ್ಯೂಷನ್ ಏಜೆನ್ಸಿ ನಡೆಸುತ್ತಿದ್ದರು. ಚಂದ್ರನ್–ರೀನಾ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಕಿರಿಯ ಪುತ್ರಿ ಪಿ. ಶ್ರೀಲಕ್ಷ್ಮಿ ಕೇರಳ ಪೊಲೀಸ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಮಟ್ಟನ್ನೂರು ಪ್ರಗತಿ ಪಿಎಸ್‌ಸಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದ ಬಳಿಕ ಅನುಶ್ರೀ ಬ್ಯಾಂಕ್ ಉದ್ಯೋಗ ಪಡೆದಿದ್ದರು.
ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ – ವಿಶೇಷ ಚಾನೆಲ್
https://www.instagram.com/visheshachannel/
https://www.facebook.com/profile.php?id=61572771802334
https://www.linkedin.com/in/visheshachannel/
www.youtube.com/@VisheshaChannelofficial
#news #viral #blogger #viralnews #dailypost

0 Comments