Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಾಡೂರಿನ ಅಂಗಡಿ ವರಾಂಡದಲ್ಲಿ ಮಧ್ಯವಯಸ್ಕನ ಮೃತದೇಹ ಪತ್ತೆ

 


ಕಾಸರಗೋಡು: ಪುತ್ತಿಗೆ ಬಾಡೂರಿನಲ್ಲಿ ಮುಚ್ಚಿದ ಅಂಗಡಿಯ ವರಾಂಡದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ಇಂದು (ಭಾನುವಾರ) ಮಧ್ಯಾಹ್ನದ ಬಳಿಕ ಅಂಗಡಿಯ ವರಾಂಡದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ದೇಲಂಪಾಡಿ ನಿವಾಸಿ ವಿಠಲ ಆಳ್ವ (48) ಎಂದು ಗುರುತಿಸಲಾಗಿದೆ. ಇವರು ಅವಿವಾಹಿತರಾಗಿದ್ದು ಬಹು ಕಾಲದಿಂದ ಮುಚ್ಚಿದ್ದ ಅಂಗಡಿಯ ಸುತ್ತಮುತ್ತ ಕಾಡು ಬೆಳೆದು ನಿಂತಿರುವುದಾಗಿ ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement