ಕೊಚ್ಚಿ : ಯೂನಿಫಾರ್ಮ್ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ವೇಳೆ ಇಸ್ತ್ರಿ ಪೆಟ್ಟಿಗೆಯಿಂದ ವಿದ್ಯುತ್ ಶಾಕ್ ಹೊಡೆದು 13 ವರ್ಷದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಪರವೂರು ನಗರಸಭೆ 4ನೇ ವಾರ್ಡ್‌ನ ಚೆರಿಯ ಪಳ್ಳಂತುರುತ್ ಅಡಿಮಪ್ಪರಂಬಿಲ್ ನಿವಾಸಿ ಸನೀಶ್–ನೀತು ದಂಪತಿಯ ಪುತ್ರಿ ಸ್ವಾತಿ (13) ಮೃತಪಟ್ಟವರು.
ಪರವೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಸ್ವಾತಿ, ರವಿವಾರ ಮಧ್ಯಾಹ್ನ ಶಾಲಾ ಸಮವಸ್ತ್ರವನ್ನು ಇಸ್ತ್ರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ. ತಕ್ಷಣ ಆಕೆಯನ್ನು ಪರವೂರು ಸರ್ಕಾರಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

0 Comments