Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರಸ್ತೆ ಬದಿಯಲ್ಲಿ ರಾಶಿ ಹಾಕಿದ್ದ ವಿದ್ಯುತ್ ಕಂಬ ಬಿದ್ದು ಯುವಕ ಸಾವು

ತಳಿಪರಂಬ : ರಸ್ತೆ ಬದಿಯಲ್ಲಿ ರಾಶಿ ಹಾಕಿ ಇಡಲಾಗಿದ್ದ ವಿದ್ಯುತ್ ಕಂಬವೊಂದು ಮೈಮೇಲೆ ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಾಂಝಿರಂಗಾಡ್ ವಡಕ್ಕೆಮೂಲ ನಿವಾಸಿ ಕೇಲೋತ್ ಮನೆಯ ಕೆ. ಅಜೀಶ್ (36) ಮೃತರು. ಆಗಸ್ಟ್ 13ರಂದು ರಾತ್ರಿ ಸುಮಾರು 7 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

ಪಿ. ಚಂದ್ರನ್ ಹಾಗೂ ಕೇಲೋತ್ ಮಾಧವಿ ದಂಪತಿಯ ಪುತ್ರರಾ ಅಜೀಶ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಂದೆ, ತಾಯಿ, ಸಹೋದರಿಯರಾದ ಚಂದ್ರಿಕಾ ಮತ್ತು ಸುಷಮಾ (ಕೋಟಕ್ಕಡವು) ಅವರನ್ನು ಅಗಲಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅಜೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಇಂದು ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗುವುದುಎಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement