ಪೆರ್ಲ : ಕೆಳಗಿನ ಪೇಟೆಯ ಬಜಕೂಡ್ಲು ರಸ್ತೆ ಸಮೀಪ ಇರುವ ಬ್ಯಾಟರಿ ಅಂಗಡಿಯೊಂದರಿಂದ ಹಾಡು ಹಗಲೇ ಡ್ರಾವರಿನಿಂದ ಹಣ ಎಗರಿಸಿ ಖದೀಮನೋರ್ವ ಪರಾರಿಯಾದ ಘಟನೆ ವರದಿಯಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ರವಿ ಕುಮಾರ್ ಎಂಬವರ ಮಾಲಕತ್ವದಲ್ಲಿರುವ ಎಕ್ಸೆಲ್ ಬ್ಯಾಟರಿ ಅಂಗಡಿಯ ಡ್ರಾವರಿನಲ್ಲಿರಿಸಿದ 7 ಸಾವಿರ ರೂ ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ರವಿ ಅವರು ಪಕ್ಕದ ಅಂಗಡಿಗೆ ತೆರಳಿದ ಸಂದರ್ಭ ನೋಡಿ ಹಣ ಎಗರಿಸಲಾಗಿದೆ. ಈ ಸಂದರ್ಭ ಅಂಗಡಿ ಬದಿಯಲ್ಲಿ ಪ್ಯಾಂಟು ಶರ್ಟ್ ಧರಿಸಿದ ಅಪರಿಚಿತ ಯುವಕನೋರ್ವ ನಿಂತಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಹಣ ಎಗರಿಸಿ ಪರಾರಿಯಾಗುವ ದೃಶ್ಯ ಪಕ್ಕದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅ ವ್ಯಕ್ತಿಯನ್ನು ಪತ್ತೆ ಹಚ್ಚಲು ಎಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ.

0 Comments