Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಗುಣಾಜೆಯಲ್ಲಿ 4 ಲಕ್ಷ ಮೌಲ್ಯದ ವಿದ್ಯುತ್ ಕೇಬಲ್ ಕಳವುಗೈದ ಪೆರ್ಲ ನಿವಾಸಿ ಸಹಿತ ನಾಲ್ವರು ಅಂತರರಾಜ್ಯ ಕಳ್ಳರ ಬಂಧನ: ಮುಖವಾಡ ಧರಿಸಿ ಪಿಕಪ್ ವಾಹನದಲ್ಲಿ ಸಾಗಿಸಿದ ಕೃತ್ಯ ಸಿಸಿಟಿವಿಯ ನೆರವಿನಿಂದ ಬಯಲು


ಬದಿಯಡ್ಕ: ಪೆರ್ಲ ವಿದ್ಯುತ್ ಸೆಕ್ಷನ್ ವ್ಯಾಪ್ತಿಯ ಗುಣಾಜೆ ಟ್ರಾನ್ಸ್‌ಫಾರ್ಮರ್ ಸಮೀಪ ದ್ಯುತಿ ಯೋಜನೆ ಕಾಮಗಾರಿಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು ₹4 ಲಕ್ಷ ಮೌಲ್ಯದ ಎಲ್‌ಟಿ ಎಬಿ ಕೇಬಲ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಮಂಗಳೂರು ಸಮೀಪದ ಮಂಜನಾಡಿ, ಅಸ್ಸಿಜೋಳಿ ನಿವಾಸಿ, ಪ್ರಸ್ತುತ ಎಣ್ಮಕಜೆ ಪಂಚಾಯತಿನ ಪೆರ್ಲ ಸಮೀಪದ ಅಡ್ಕದ ಬದ್ರಿಯಾ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ನೌಶಾದ್ (34), ಕುಂಬಳೆ ಸಮೀಪದ ಕಿದೂರು ಪಂಚಿಕ್ಕಲ್ ಇಬ್ರಾಹಿಂ ಅವರ ಪುತ್ರ ಮೊಹಮ್ಮದ್ ಇ. (42), ಬಂಟ್ವಾಳ ತಾಲೂಕು ಪರಂಗಿಪೇಟೆ ಸಂಕಿರ್ಮುಲ್ ನಿವಾಸಿ ಇಸ್ಮಾಯಿಲ್ ಅವರ ಪುತ್ರ ಮೊಹಮ್ಮದ್ ಶಾಹಿದ್ (29), ಬಂಟ್ವಾಳ ಬೈತುಲ್ ಪದವು ಸುಂದರ ಪೂಜಾರಿ ಅವರ ಪುತ್ರ ನವೀನ್ (48) ಬಂಧಿತ ಆರೋಪಿಗಳಾಗಿದ್ದಾರೆ.

ಸೆ.24ರಂದು ಮುಂಜಾನೆ ಸುಮಾರು 2.30ರಿಂದ 4 ಗಂಟೆಯೊಳಗೆ ಮುಖವಾಡ ಧರಿಸಿದ ಕೆಲವರು ಸ್ಥಳಕ್ಕೆ ಆಗಮಿಸಿ, ಎರಡು ಡ್ರಮ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು 1,000 ಮೀಟರ್ ಎಲ್‌ಟಿ ಎಬಿ ಕೇಬಲ್‌ನ್ನು ಪಿಕಪ್ ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪೆರ್ಲ ವಿದ್ಯುತ್ ಸೆಕ್ಷನ್‌ನ ಸಹಾಯಕ ಎಂಜಿನಿಯರ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಬಳಿಕ ಸಮೀಪದ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ, ಮುಖವಾಡ ಧರಿಸಿದ ವ್ಯಕ್ತಿಗಳು ಕೇಬಲ್‌ನ್ನು ಪಿಕಪ್ ವಾಹನಕ್ಕೆ ತುಂಬಿಕೊಂಡು ತೆರಳುತ್ತಿರುವ ದೃಶ್ಯಗಳು ಲಭ್ಯವಾಗಿದ್ದವು. ಇದನ್ನು ಆಧಾರವಾಗಿರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಮೂರು ದಿನಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ತನಿಖೆಯ ಭಾಗವಾಗಿ ಎಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಖ್ ವೊಳಮುಗರ್ ಪೊಲೀಸರು ಅಗತ್ಯವಿದ್ದ ಸಿಸಿಟಿವಿ ದೃಶ್ಯಗಳು ಹಾಗೂ ಇತರ ಮಾಹಿತಿಯನ್ನು ಸಕಾಲಿಕವಾಗಿ ಒದಗಿಸುವ ಮೂಲಕ ಕಳವು ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ನೆರವಾಗಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ತಂಡದಲ್ಲಿ ಎಸ್‌.ಐ. ಸುನಿಲ್ ಕುಮಾರ್, ಎಸ್‌.ಐ. ವಿನೋದ್ ಕುಮಾರ್, ಎಎಸ್‌.ಐ. ಸಿನೀಶ್ ಸಿರಿಯಕ್, ಎಎಸ್‌.ಐ. ಶಶಿ ಪ್ರಸಾದ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಅನೀಶ್ ವರ್ಗೀಸ್, ಸುಭಾಷ್, ಗೋಕುಲ್ ಹಾಗೂ ರತೀಶ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಧನೇಶ್ ಮತ್ತು ಶಿಬಿನ್ ಹಾಗೂ ಕಾಸರಗೋಡು ಜಿಲ್ಲಾ ವಿಶೇಷ ಶಾಖೆಯ ಅಧಿಕಾರಿ ಶ್ರೀನೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮೀಣ ಪ್ರದೇಶದ ಈ ಕಳ್ಳತನವನ್ನು ಶೀಘ್ರವಾಗಿ ಬೇಧಿಸುವಲ್ಲಿ ಕಾರ್ಯನಿರತವಾದ ಪೊಲೀಸ್ ಅಧಿಕಾರಿಗಳನ್ನು ಊರವರು ಅಭಿನಂದಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement