ಮುಳ್ಳೇರಿಯ : ಹಾಡುಹಗಲೇ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು 7.5 ಪವನ್ ಚಿನ್ನಾಭರಣ ಕಳವು ಮಾಡಿದ ಘಟನೆ ಆದೂರು, ಬಲ್ಲಕ್ಕಾಡ್‌ನಲ್ಲಿ ನಡೆದಿದೆ.
ಆಟೋ ಚಾಲಕ ಸದಾನಂದ(53) ಅವರ ಮನೆಯಲ್ಲಿ ಭಾನುವಾರ ಹಗಲು ಕಳ್ಳತನ ನಡೆದಿದೆ. ಸದಾನಂದ ಆಟೋದಲ್ಲಿ ಕೆಲಸಕ್ಕೆ ತೆರಳಿದ್ದರೆ, ಅವರ ನರ್ಸ್ ಪತ್ನಿ ಆಸ್ಪತ್ರೆಗೆ ಹಾಗೂ ಮಗ ತರಗತಿಗೆ ತೆರಳಿದ್ದರು. ಸದಾನಂದನ್ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.
ಸದಾನಂದ ನೀಡಿದ ದೂರಿನ ಆಧಾರದ ಮೇಲೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

0 Comments