ಕಾಸರಗೋಡು : ಉಕ್ಕಿನಡ್ಕದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜು, ಕಾಸರಗೋಡಿನ ಪ್ರಥಮ ಬ್ಯಾಚ್‌ನ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿನಿ ತ್ರಿಶ್ಯೂರ್ ಮೂಲದ ಜುವಲ್ನಾ ಸಿ.ಜಿ. (24)ಅವರು ಅರ್ಬುದ ರೋಗದಿಂದ ನಿಧನರಾಗಿದ್ದಾರೆ.
ವಿದ್ಯಾಭ್ಯಾಸದ ಅವಧಿಯಲ್ಲಿ ಸಹಪಾಠಿಗಳು, ಅಧ್ಯಾಪಕರು ಹಾಗೂ ಕಾಲೇಜಿನೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಜುವಲ್ನಾ ಅವರ ಅಕಾಲಿಕ ನಿಧನವು ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಚಿಕ್ಕ ವಯಸ್ಸಿನಲ್ಲೇ ಗಂಭೀರ ಕಾಯಿಲೆಯಿಂದ ನಿಧನರಾದ ಜುವಲ್ನಾ ಅವರ ಅಗಲಿಕೆಗೆ ಕಾಲೇಜಿನ ವತಿಯಿಂದ ಸಂತಾಪ ಸೂಚಿಸಲಾಯಿತು. ಸಹಪಾಠಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಹಾರೈಸಿದರು.

0 Comments