Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಡೂರಿನಲ್ಲಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಅಡೂರು : ಮನೆಯೊಳಗೆ 26 ವರ್ಷದ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಅಡೂರು ಮಣಿಯೂರು ಚೆನ್ನಯ್ಯಮೂಲೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅಪ್ಪಯ್ಯ ನಾಯ್ಕ್ ಹಾಗೂ ಪ್ರೇಮ ದಂಪತಿಯ ಪುತ್ರ ಶೋಭಿತ್ (26) ಮೃತಪಟ್ಟ ಯುವಕ.

ಮಂಗಳವಾರ ಬೆಳಗ್ಗೆ ತಂದೆಯೊಂದಿಗೆ ಸಮೀಪದ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಶೋಭಿತ್, ಬಹಳ ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಆತ ಎಲ್ಲಿದ್ದಾನೆಂದು ಹುಡುಕಾಟ ನಡೆಸಿದ ಕುಟುಂಬಸ್ಥರು, ಈ ಹಿಂದೆ ಕುಟುಂಬ ವಾಸವಿದ್ದ ಹಳೆಯ ಮನೆಯೊಳಗೆ ಆತ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಆತನನ್ನು ಮುಳ್ಳೇರಿಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಶೋಭಿತ್ ಅಡೂರಿನ ಅಡಿಕೆ ವ್ಯಾಪಾರ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವಿವಾಹಿತರಾಗಿದ್ದ ಅವರು ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಯುವಕರಾಗಿದ್ದರು ಎನ್ನಲಾಗಿದೆ. ಮೃತರು ತಂದೆ ಅಪ್ಪಯ್ಯ ನಾಯ್ಕ್, ತಾಯಿ ಪ್ರೇಮ ಹಾಗೂ ಸಹೋದರರಾದ ಸುಕುಮಾರನ್ ಮತ್ತು ಯೋಗೀಶ್ವರಿ ಅವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement