Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಟುಕುಕ್ಕೆ ಬಾಳೆಮೂಲೆಯಲ್ಲಿ ಯುವಕನ ಮೃತದೇಹ ನಿರ್ಜನ‌ ಪ್ರದೇಶದ ಬಸ್ ತಂಗುದಾಣದಲ್ಲಿ ಪತ್ತೆ

ಪೆರ್ಲ : ಯುವಕನೋರ್ವನ ಮೃತದೇಹ ನಿರ್ಜನ ಪ್ರದೇಶದ ಖಾಸಗೀ ಬಸ್ ತಂಗುದಾಣವೊಂದರಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿದೆ. ಮೃತ ಯುವಕ ಬಾಳೆಮೂಲೆಯ ದಿ.ರಾಮನಾಯ್ಕ ಎಂಬವರ ಪುತ್ರ ಜಯಾ ಘಾಟಿ ಯಾನೆ ದಯಾನಂದ (45) ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ವೇಳೆ ಗ್ರಾಮೀಣ ಪ್ರದೇಶವಾದ ಬಾಳೆಮೂಲೆಯ ಖಾಸಗೀ ನಿರ್ಮಿತ ಬಸ್ ತಂಗುದಾಣವೊಂದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬದಿಯಡ್ಕ ಪೋಲಿಸರು ಅಸ್ವಾಭಾವಿಕ ಮರಣ ಎಂದು‌ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ದಯಾನಂದ ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಮೃತರು ಪತ್ನಿ ಸೇಸಮ್ಮ ಮಗಳು ಶಿಲ್ಪಾ  ಇವರ ಒರ್ವ ಸಹೋದರ ಬಾಲಕೃಷ್ಣ ಈ ಹಿಂದೆಯೇ ನಿಧನ ಹೊಂದಿದ್ದಾರೆ. ಸಹೋದರಿ ಗೀತಾಳನ್ನು ಕರ್ನಾಟಕ ಕ್ಕೆ ವಿವಾಹ ಮಾಡಿ ಕೊಡಲಾಗಿದೆ.

Post a Comment

0 Comments

ಜಾಹೀರಾತು

Responsive Advertisement