Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕರಾಡ್ಹ ಸಮಾಜದ ಹಿರಿಯ ಪುರೋಹಿತ ಶ್ರೀಧರ ಭಟ್ ಸಜಂಗದ್ದೆ ನಿಧನ


ಪೆರ್ಲ: ಪಡ್ರೆ ಸಮೀಪದ ಸಜಂಗದ್ದೆ ನಿವಾಸಿ ಕರಾಡ್ಹ ಸಮಾಜದ ಹಿರಿಯ ಪುರೋಹಿತ, ಕೃಷಿಕ ಮುದ್ದಣ್ಣ ಯಾನೆ ಶ್ರೀಧರ ಭಟ್ (65) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಪೌರೋಹಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವರು ಇಡಿಯಡ್ಕ ಕ್ಷೇತ್ರ ಸೇರಿದಂತೆ ಬೃಹತ್ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಹೋಮ, ಹವನಾದಿಗಳನ್ನು ನೆರವೇರಿಸುವ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.

ದಿ. ನಾರಾಯಣ ಭಟ್–ಗಿರಿಜಾ ದಂಪತಿಯ ಪುತ್ರರಾದ ಮೃತರು ಪತ್ನಿ ಪ್ರೇಮಾ, ಮಕ್ಕಳಾದ ಕೃಷ್ಣರಾಜ, ಮಾಳವಿಕ ಹಾಗೂ ಸಹೋದರರಾದ ಶ್ರೀಹರಿ ಭಟ್ ಸಜಂಗದ್ದೆ (ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರು), ರಾಮ ಭಟ್ (ನಿವೃತ್ತ ಉಪನ್ಯಾಸಕರು, ಯಕ್ಷಗಾನ ಅರ್ಥಧಾರಿ), ನಿತ್ಯಾನಂದ ಪಡ್ರೆ (ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಸಂಪಾದಕರು) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement