Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದಿಂದ 25ನೇ ವರ್ಷದ ದಸರಾ ಕ್ರೀಡಾಕೂಟ ಸಂಪನ್ನ

 

ಮಂಗಳೂರು: ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ವತಿಯಿಂದ ಆಯೋಜಿಸಲಾಗಿದ್ದ 25ನೇ ವರ್ಷದ ದಸರಾ ಕ್ರೀಡಾಕೂಟವು ಜಪ್ಪಿನಮೊಗರು ಶಾಲಾ ಆವರಣದಲ್ಲಿರುವ ಎರ್ಮಾಜಾಲುಗುತ್ತು ದಿ. ಸಂಕಪ್ಪ ರೈ ಮತ್ತು ಕುಟುಂಬಸ್ಥರ ಸ್ಥಳದಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪಿಲಿಚಾಮುಂಡಿ ಕ್ಷೇತ್ರ ಪಿಲಿಚಂಡಿ ಪಾದೆ ತಂದೊಳಿಗೆಯ ಅರ್ಚಕ ಹಾಗೂ ಟ್ರಸ್ಟಿ ಕಿಶೋರ್ ಕೊಟ್ಟಾರಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕದ ಉಪಾಧ್ಯಕ್ಷ ಶಿವಾನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಪ್ರಗತಿ ಡ್ರೈವಿಂಗ್ ಸ್ಕೂಲ್ ಮಾಲೀಕ ಜೆ. ರಾಘವ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಜಯಂತಿ ಬಿ. ಶೆಟ್ಟಿ, ಡಿ.ವೈ.ಎಫ್.ಐ. ನಗರ ಸಮಿತಿ ಅಧ್ಯಕ್ಷ ಚರಣ್ ಶೆಟ್ಟಿ, ಜಪ್ಪಿನಮೊಗರು ಘಟಕದ ಅಧ್ಯಕ್ಷ ಜೆ. ಹನೀಫ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಜಪ್ಪಿನಮೊಗರು ಸಂಚಾಲಕ ದಿನೇಶ್ ಶೆಟ್ಟಿ ಹಾಗೂ ಭಾರತೀಯ ಜೀವ ವಿಮಾ ನಿಗಮದ ಸಾಹಿರ ಸ್ವರ್ಣಲತಾ ಡಿಸೋಜ ಉಪಸ್ಥಿತರಿದ್ದರು. ಅತಿಥಿಗಳು ವಾಲಿಬಾಲ್ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಘಟಕದ ಕೋಶಾಧಿಕಾರಿ ಅಭಿಷೇಕ್ ಸ್ವಾಗತಿಸಿದರು. ಚಿರಾಗ್ ನಾಯ್ಕ್ ವಂದಿಸಿದರು. ಪವನ್ ಸುಲಾಯ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಅಧ್ಯಕ್ಷ ಮನೋಜ್ ಶೆಟ್ಟಿ ವಹಿಸಿದ್ದರು. ಡಿ.ವೈ.ಎಫ್.ಐ. ಜಿಲ್ಲಾ ಸಮಿತಿ ಅಧ್ಯಕ್ಷ ಮನೋಜ್ ವಾಮಂಜೂರು, ಆಟೋ ಟ್ರೇಡರ್ಸ್ ಜಪ್ಪಿನಮೊಗರು ಮತ್ತು ಗೋರಿಗುಡ್ಡದ ಮಾಲೀಕ ದಯಾನಂದ ರಾವ್, ಉದ್ಯಮಿ ರಾಕೇಶ್ ರೈ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ಸಹಕಾರ ರತ್ನ ಪುರಸ್ಕೃತ ಚಿತ್ತರಂಜನ್ ಬೋಳಾರ್, ಶ್ರೀ ಕೋರ್ದಬ್ಬು ದೈವಸ್ಥಾನದ ತಾರ್ದೋಲ್ಯ ಜಪ್ಪಿನಮೊಗರು ಅಧ್ಯಕ್ಷ ಶೈಲೇಶ್ ಭಂಡಾರಿ, ಹಿಡೆನ್ ಹೆವೆನ್ ರೆಸಾರ್ಟ್ ಆ್ಯಂಡ್ ಹೋಂ ಸ್ಟೇಯ ಮಾಲೀಕ ಸಂತೋಷ್ ಶೆಟ್ಟಿ, ಯುವ ಉದ್ಯಮಿ ಶೈಲೇಶ್ ಪೂಜಾರಿ ತಂದೊಳಿಗೆ, ಜಪ್ಪಿನಮೊಗರು ಯುವಕ ವೃಂದದ ಅಧ್ಯಕ್ಷ ಕೃಷ್ಣ ಶೆಟ್ಟಿ ಹಾಗೂ ಸಿಪಿಐ(ಎಂ) ಜಪ್ಪಿನಮೊಗರು ಶಾಖೆಯ ಕಾರ್ಯದರ್ಶಿ ಉದಯಚಂದ್ರ ರೈ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಅಂಗನವಾಡಿ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಳಾಂಗಣ ಸ್ಪರ್ಧೆಗಳಾದ ಸಂಗೀತ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳೂ ನಡೆದವು.

ಯುವಕರ ವಾಲಿಬಾಲ್ ಪಂದ್ಯಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ ಹಾಗೂ ಸನ್‌ಶೈನ್ ದ್ವಿತೀಯ ಸ್ಥಾನ ಗಳಿಸಿತು. ಮುಕ್ತ ಹಗ್ಗಜಗ್ಗಾಟದಲ್ಲಿ ಬಜಾಲ್‌ನ ಜನತಾ ವ್ಯಾಯಾಮ ಶಾಲೆ ಪ್ರಥಮ ಹಾಗೂ ಜಪ್ಪಿನಮೊಗರು ತಾರ್ದೋಲ್ಯ ಸೇವಾ ಸಂಘ ದ್ವಿತೀಯ ಸ್ಥಾನ ಪಡೆಯಿತು. 85 ಕೆ.ಜಿ. ವಿಭಾಗದ ಹಗ್ಗಜಗ್ಗಾಟದಲ್ಲಿ ಜಪ್ಪಿನಮೊಗರು ಮಲ್ಲಿಕಾರ್ಜುನ ಸೇವಾ ಸಂಘ ಪ್ರಥಮ ಹಾಗೂ ತಾರ್ದೋಲ್ಯ ಸೇವಾ ಸಂಘ ದ್ವಿತೀಯ ಸ್ಥಾನ ಗಳಿಸಿತು.

ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಸ್ಪಾರ್ಟನ್ ತಂಡ ಪ್ರಥಮ ಹಾಗೂ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಪ್ರಥಮ ಹಾಗೂ ಮಲ್ಲಿಕಾರ್ಜುನ ಸೇವಾ ಸಂಘ ದ್ವಿತೀಯ ಸ್ಥಾನ ಗಳಿಸಿತು.

ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಘಟಕದ ಕಾರ್ಯದರ್ಶಿ ಸ್ವಸ್ತಿಕ್ ಎಸ್. ಶೆಟ್ಟಿ ಸ್ವಾಗತಿಸಿದರು. ಮಿಖಿಲ್ ಶೆಟ್ಟಿ ವಿಜೇತರ ಹೆಸರುಗಳನ್ನು ವಾಚಿಸಿದರು. ಘಟಕದ ಜತೆ ಕಾರ್ಯದರ್ಶಿ ಗಗನ್ ಪೂಜಾರಿ ವಂದಿಸಿದರು. ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement