Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದಲ್ಲಿ ‘ರುದ್ರಂ ಆಡಿಯೋಸ್’ ಶುಭಾರಂಭ

ಪೆರ್ಲ: ಖ್ಯಾತ ಸೌಂಡ್ ಇಂಜಿನೀಯರ್ ಪ್ತವೀಣ್ ರೈ ನೇತೃತ್ವದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗಳ ‘ರುದ್ರಂ ಆಡಿಯೋಸ್’ಗೆ ಸೋಮವಾರ  ಚಾಲನೆ ನೀಡಲಾಯಿತು. ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ‘ರುದ್ರಂ ಆಡಿಯೋಸ್’ ಸಂಸ್ಥೆಯು ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡಿದ್ದು, ಸೌಂಡ್ ಸಿಸ್ಟಮ್, ಲೈಟಿಂಗ್, ಡಿಜೆ ಸಿಸ್ಟಮ್, ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಿಗೆ ಅಗತ್ಯವಿರುವ ಸೌಲಭ್ಯಗಳು ಲಭ್ಯವಿವೆ.

ವಿವಾಹ, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಮಾರಂಭಗಳು ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಉತ್ತಮ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಸೇವೆ ನೀಡಲು ಸಂಸ್ಥೆ ಮುಂದಾಗಿದೆ. ‘ಬೆಟರ್ ಸೌಂಡ್, ಬಿಗ್ಗರ್ ಮೊಮೆಂಟ್ಸ್’ ಎಂಬ ಧ್ಯೇಯದೊಂದಿಗೆ ಕಾರ್ಯಾರಂಭಿಸಿರುವ ರುದ್ರಂ ಆಡಿಯೋಸ್, ಪೆರ್ಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಕಾರ್ಯಕ್ರಮಗಳ ಆಯೋಜನೆಗೆ ಅಗತ್ಯವಿರುವ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿ ಹೊಂದಿದೆ ಎಂದು ಮಾಲಕರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement