Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ತಿರುವೋಣಂ ಬಂಪರ್ ಲಾಟರಿಯ ರೂ.30 ಕೋಟಿ ಬಹುಮಾನಕ್ಕೆ ಹಕ್ಕು ಮಂಡಿಸಿ ತಮಿಳ್ನಾಡು ನಿವಾಸಿ ಪ್ರತ್ಯಕ್ಷ : ಅಸಲಿ ಲಾಟರಿ ಕತೆಯೇನು!

ಪಾಲಕ್ಕಾಡ್ : ಈ ಬಾರಿಯ ತಿರುವೋಣಂ ಬಂಪರ್ ಲಾಟರಿ ವಿಜೇತನ ಹೆಸರು ವಿಳಾಸ ಗೌಪ್ಯವಾಗಿರಿಸಿದ ಹಿನ್ನಲೆಯ ನಡುವೆ ನಿಜವಾದ ಅದೃಷ್ಟಶಾಲಿ ತಾನೇ ಎಂದು ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಹೇಳಿಕೊಂಡು ಮುಂದೆ ಬಂದ ನಾಟಕೀಯ ಸನ್ನಿವೇಷ ಅಚ್ಚರಿ ಮೂಡಿಸಿದೆ. ರೂ.30 ಕೋಟಿ ಬಹುಮಾನಕ್ಕೆ ಹಕ್ಕು ಮಂಡಿಸಿದ

ಸಾದಿಖ್ ಎಂಬ ವ್ಯಕ್ತಿ ಪಾಲಕ್ಕಾಡ್ ಎಸ್‌ಪಿ ಕಚೇರಿಗೆ ತೆರಳಿ ಈ ಕುರಿತು ದೂರು ನೀಡಿದ್ದಾರೆ. ಮೂಲ ಲಾಟರಿ ಟಿಕೆಟ್ ಕಳೆದುಹೋಗಿದ್ದು, ಅದರ ಫೋಟೋ ಮೊಬೈಲ್‌ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ. ಈ ಬಾರಿ TL 360615 ಸಂಖ್ಯೆಯ ಟಿಕೆಟ್‌ಗೆ ತಿರುವೋಣಂ ಬಂಪರ್ ಬಹುಮಾನ ಲಭಿಸಿತ್ತು. ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ಮಾರಾಟವಾದ ಟಿಕೆಟ್‌ಗೆ ಬಹುಮಾನ ಬಂದಿದೆ ಎಂದು ಮಾಹಿತಿ ಲಭ್ಯವಾಗಿತ್ತು.

ಈ ನಡುವೆ ಬಹುಮಾನ ವಿಜೇತರು ಲಾಟರಿ ಇಲಾಖೆಯನ್ನು ಸಂಪರ್ಕಿಸಿ ಹಣವನ್ನು ಪಡೆದುಕೊಂಡಿರುವುದು ದೃಢಪಟ್ಟಿದೆ. ಆದರೆ ಇದೀಗ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ತಮಿಳುನಾಡು ಮೂಲದ ಸಾದಿಖ್ ಅವರು ಪಾಲಕ್ಕಾಡ್ ರೈಲು ನಿಲ್ದಾಣದಿಂದ ಟಿಕೆಟ್ ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಾನೇ ನಿಜವಾದ ಬಹುಮಾನ ವಿಜೇತ ಎಂದು ಅವರು ಪಾಲಕ್ಕಾಡ್ ಎಸ್‌ಪಿ ಕಚೇರಿಯಲ್ಲಿ ಹಕ್ಕು ಮಂಡಿಸಿದ್ದಾರೆ. ಟಿಕೆಟ್‌ನ ಮೂಲ ಪ್ರತಿ ಇಲ್ಲದಿರುವುದರಿಂದ, ಮೊಬೈಲ್‌ನಲ್ಲಿರುವ ಟಿಕೆಟ್‌ನ ಫೋಟೋವನ್ನು ಆಧಾರವಾಗಿ ತೋರಿಸಿರುವುದಾಗಿ ತಿಳಿದುಬಂದಿದೆ. ಈ ವಿಷಯ ಲಾಟರಿ ಪ್ರಿಯರಲ್ಲಿ ಚರ್ಚಾಸ್ಪದವಾಗಿದ್ದು ಅಸಲಿ ಯಾವುದು ನಕಲಿ ಏನೆಂದು ತಿಳಿಯದಂತಾಗಿದೆ.

Post a Comment

0 Comments

ಜಾಹೀರಾತು

Responsive Advertisement