Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ ಸಮೀಪದ ಬೆಂಗಪದವಿನಲ್ಲಿ ಜತೆಗಾರನಿಂದ ಇರಿತಕ್ಕೊಳಗಾಗಿ ರಬ್ಬರ್ ಕಾರ್ಮಿಕನ ಸ್ಥಿತಿ ಗಂಭೀರ : ಇರಿದ ಆರೋಪಿಯ ಸೆರೆ



ಪೆರ್ಲ : ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಬೇಂಗಪದವು ಸಮೀಪ ರಬ್ಬರ್ ಕಾರ್ಮಿಕರಿಬ್ಬರೊಳಗೆ ನಡೆದ ವಾಗ್ವಾದ ತೀವ್ರಗೊಂಡು ಕತ್ತಿ ಇರಿತ ನಡೆದ ಬಗ್ಗೆ ವರದಿಯಾಗಿದೆ.

ಮೂಲತಃ ಮಲೆಯಾಳಿಯಾದ ಕೇರಳದಿಂದ ಬಂದ ರಬ್ಬರ್ ಕಾರ್ಮಿಕನಾದ ವಿಜಯ್ (42) ಎಂಬಾತ ಕತ್ತಿ ಇರಿತಕ್ಕೊಳಗಾಗಿದ್ದು  ಎಂದು ಗುರುತಿಸಲಾಗಿದೆ.ಅಜಿ ಎಂಬಾತ ಇರಿದಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ. ಸಂಜೆ ಸುಮಾರು 8 ಗಂಟೆಯ ವೇಳೆಗೆ ಗಲಾಟೆ ನಡೆದ ಬಗ್ಗೆ ಬೆಳಕಿಗೆ ಬಂದಿದ್ದು ಆರೋಪಿಯು ತಲೆಗೆ ಸುತ್ತಿಗೆಯಿಂದ ಬಡಿದು ಕೈಗೆ ಕತ್ತಿಯಿಂದ ಇರಿದು ಗಾಯಗೊಳಿಸಿದ್ದು ಸಮೀಪ ವಾಸಿಗಳು ವಿಷಯ ತಿಳಿದು ಬದಿಯಡ್ಕ  ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ  ಪೋಲಿಸರು ಸ್ಥಳಕ್ಕಾಗಮಿಸಿ ಇರಿತಕ್ಕೊಳಗಾದವನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇರಿದ ಆರೋಪಿಯನ್ನು ಪೋಲಿಸ್ ಬಂಧಿಸಿದ್ದಾರೆಂದು ಮಾಹಿತಿ ಇದೆ. ಸ್ಥಳದಲ್ಲಿ ನಾಗರಿಕಗರು ಜಮಾಸಿದ್ದಾರೆಂದು ತಿಳಿದು ಬಂದಿದೆ‌.


Post a Comment

0 Comments

ಜಾಹೀರಾತು

Responsive Advertisement