Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಭಾವೈಕ್ಯತೆಗೆ ಸಾಕ್ಷಿಯಾದ ಶ್ರಮದಾನ : ಮಣಿಯಂಪಾರೆಯಲ್ಲಿ ಭಜನಾ ಮಂದಿರ ಜೀರ್ಣೋದ್ಧಾರಕ್ಕೆ ಕ್ರೈಸ್ತ ಬಾಂಧವರ ಕೈಜೋಡಿಕೆ

ಪೆರ್ಲ : ಮಣಿಯಂಪಾರೆಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕೆ ಧರ್ಮಭೇದ ಮರೆತು ಕ್ರೈಸ್ತ ಬಾಂಧವರು ಕೈಜೋಡಿಸುವ ಮೂಲಕ ಸೌಹಾರ್ದತೆ ಹಾಗೂ ಭಾವೈಕ್ಯತೆಗೆ ಮಾದರಿಯಾದರು.

ಮಂಗಳೂರು ಜೆಪ್ಪು ಸೆಮಿನರಿಯ ಸಹೋದರರು ಹಾಗೂ ನಿರ್ದೇಶಕರ ನೇತೃತ್ವದಲ್ಲಿ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಸಾರ್ವಜನಿಕ ಶ್ರಮದಾನ ನಡೆಸಲಾಯಿತು. ಮಂದಿರದ ನಿರ್ಮಾಣ ಕಾರ್ಯದಲ್ಲಿ ಕ್ರೈಸ್ತ ಸಮುದಾಯದವರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಸೇವೆ ಸಲ್ಲಿಸಿರುವುದು ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಮಣಿಯಂಪಾರೆ ಚರ್ಚ್‌ನ ಧರ್ಮಗುರು ವಂದನೀಯ ಫಾ. ನೆಲ್ಸನ್ ಡಿ’ಅಲ್ಮೇಡ, ಚಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ ಹಾಗೂ ಐಸಿವೈಎಂ ಸದಸ್ಯರು ಸೇರಿದಂತೆ ಹಲವರು ಶ್ರಮದಾನದಲ್ಲಿ ಭಾಗವಹಿಸಿದರು.

ಧರ್ಮ ಬೇರೆ, ಸೇವೆಯ ಮನೋಭಾವ ಒಂದೇ ಎಂಬ ಸಂದೇಶ ಸಾರಿದ ಈ ಶ್ರಮದಾನವು ಮಣಿಯಂಪಾರೆಯ ಸೌಹಾರ್ದ ಪರಂಪರೆಗೆ ಮತ್ತೊಂದು ಅರ್ಥಪೂರ್ಣ ಸೇರ್ಪಡೆಯಾಯಿತು.

Post a Comment

0 Comments

ಜಾಹೀರಾತು

Responsive Advertisement