Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಚೇವಾರು ಸಮೀಪದ ಕುಡಾಲು ಮೇರ್ಕಳದಲ್ಲಿ ಮಹಿಳೆ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಕುಂಬಳೆ : ಪೈವಳಿಕೆ ಪಂಚಾಯತಿನ ಚೇವಾರು ಸಮೀಪ ಕುಡಾಲು ಮೇರ್ಕಳ ಎಂಬಲ್ಲಿ ಮಹಿಳೆಯೊಬ್ಬರು ಮನೆಯ ವರಾಂಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಲಂಕಿನಡ್ಕ ನಿವಾಸಿ ಸವಿತಾ (51) ಮೃತಪಟ್ಟ ಮಹಿಳೆ.

ಶನಿವಾರ ಬೆಳಗ್ಗೆ ಮನೆಯ ವರಾಂಡದಲ್ಲಿದ್ದ ಬೆಡ್‌ನಲ್ಲಿ ಸವಿತಾ ಮೃತದೇಹ ಪತ್ತೆಯಾಗಿದೆ  ಕರ್ನಾಟಕದ ಶಿವಮೊಗ್ಗ ಮೂಲದ ಚೆನ್ನಪ್ಪ ಎಂಬವರೊಡನೆ ವಾಸಿಸುತ್ತಿದ್ದ ಸವಿತಾ ಮೃತಪಟ್ಟ ವಿಚಾರ ಸ್ವತಃ ಚೆನ್ನಪ್ಪರೇ  ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹದ ಕೈ ಹಾಗೂ ಕಾಲುಗಳಲ್ಲಿ ಗಾಯದ ಗುರುತುಗಳಿರುವುದಾಗಿ ತಿಳಿದುಬಂದಿದ್ದು, ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಠಾಣೆ ಸಿಐ ಆರ್.ಪಿ. ಅನೂಪ್ ಕೃಷ್ಣ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಕಳೆದ 16 ವರ್ಷಗಳಿಂದ ಚೆನ್ನಪ್ಪ ಸವಿತಾ ಅವರೊಂದಿಗೆ ವಾಸಿಸುತ್ತಿದ್ದಳೆಂದು  ತಿಳಿದುಬಂದಿದ್ದು ಇದೀಗ  ವರ್ಷಗಳ ಹಿಂದೆ ಲೈಫ್ ಯೋಜನೆಯಡಿ ನಿರ್ಮಿಸಲಾದ ಮನೆಯಲ್ಲಿ ಸವಿತಾ ಹಾಗೂ ಚೆನ್ನಪ್ಪ ವಾಸಿಸುತ್ತಿದ್ದರು.  ಇಬ್ಬರೂ ಆಗಾಗ್ಗೆ ಮದ್ಯಪಾನ ಮಾಡಿ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತದೇಹ ಮರಣೋತ್ತರ ಪರೀಕ್ಷೆಗಾಗಿ  ಕಳುಹಿಸಲಾಗಿದೆ. ಸಾವಿನ ನಿಖರ ಕಾರಣ  ತಿಳಿದುಬರಬೇಕಿದೆ.

Post a Comment

0 Comments

ಜಾಹೀರಾತು

Responsive Advertisement