Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಓಣಂ ಬಂಪರ್ ತಳಿಪರಂಬ ನಿವಾಸಿಯ ಕೈವಶ : 16.47 ಕೋಟಿ ರೂ. ಲಭ್ಯದ ಹಿನ್ನಲೆ ಭದ್ರತಾ ದೃಷ್ಟಿಯಿಂದ ವಿವರಗಳನ್ನು ಗೌಪ್ಯವಾಗಿರಿಸಿದ ಅದೃಷ್ಟಶಾಲಿ

ತಳಿಪರಂಬ : ಈ ಬಾರಿಯ ಕೇರಳ ಲಾಟರಿ ಓಣಂ ಬಂಪರ್  ವಿಜೇತರು ಯಾರು ಎನ್ನುವ ಚರ್ಚೆಯ ನಡುವೆ ಅದೃಷ್ಟಶಾಲಿ ಗೌಪ್ಯವಾಗಿ ಬಹುಮಾನ ಮೊತ್ತವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ‌. ತಳಿಪರಂಬದಿಂದ ಖರೀದಿಸಲಾಗಿದ್ದ ಅದೃಷ್ಟದ ಟಿಕೆಟ್ ಅನ್ನು ಲಾಟರಿ ಇಲಾಖೆಗೆ ಸಲ್ಲಿಸಲಾಗಿದ್ದು, ವಿಜೇತರಿಗೆ ತೆರಿಗೆ ಹಾಗೂ ಇತರ ಕಡಿತಗಳ ಬಳಿಕ 16.47 ಕೋಟಿ ರೂ.ಲಭಿಸಿದೆ.

ವಿಜೇತರ ಹೆಸರು ಸೇರಿದಂತೆ ವೈಯಕ್ತಿಕ ವಿವರಗಳನ್ನು ಲಾಟರಿ ಇಲಾಖೆ ಬಹಿರಂಗಪಡಿಸಿಲ್ಲ. ಗೌಪ್ಯತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ವಿವರಗಳನ್ನು ರಹಸ್ಯವಾಗಿಡಲಾಗಿದೆ. ಈ ಹಿಂದೆ ಲಾಟರಿ ಗೆದ್ದವರ ವಿವರಗಳು ಬಹಿರಂಗಗೊಂಡ ಬಳಿಕ ಹಣ ಕೇಳಿಕೊಂಡು ಹಲವರು ಸಂಪರ್ಕಿಸಿದ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದಂತೆ ವಿಜೇತರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಒಂದೇ ಬಾರಿ ದೊಡ್ಡ ಮೊತ್ತದ ಹಣ ಕೈಗೆ ಬಂದಿರುವುದರಿಂದ ಭದ್ರತಾ ಸಮಸ್ಯೆಗಳ ಸಾಧ್ಯತೆಯೂ ಇರುವ ಹಿನ್ನೆಲೆಯಲ್ಲಿ ವಿವರಗಳನ್ನು ಗೌಪ್ಯವಾಗಿಡಲಾಗಿದೆ.

ಈ ಬಾರಿ ಓಣಂ ಬಂಪರ್‌ನ ಮೊದಲ ಬಹುಮಾನವನ್ನು 30 ಕೋಟಿ ರೂ.ಗೆ ಹೆಚ್ಚಿಸಿದ ಬಳಿಕ ನಡೆದ ಮೊದಲ ನಗದು ಬಹುಮಾನ ವಿತರಣೆ ಇದಾಗಿದೆ. ಆದರೆ ತೆರಿಗೆ, ಹೆಚ್ಚುವರಿ ಶುಲ್ಕ ಹಾಗೂ ಇತರ ಕಡಿತಗಳ ಬಳಿಕ ವಿಜೇತರ ಕೈಗೆ 16.47 ಕೋಟಿ ರೂ. ಮಾತ್ರ ಲಭಿಸಿದೆ.

30 ಕೋಟಿ ರೂ. ಬಹುಮಾನ ಮೊತ್ತದಿಂದ ಶೇ.10ರಷ್ಟು ಅಂದರೆ 3 ಕೋಟಿ ರೂ. ಏಜೆನ್ಸಿ ಕಮಿಷನ್ ಆಗಿ ಕಡಿತವಾಗುತ್ತದೆ. ಇದಾದ ಬಳಿಕ ಉಳಿಯುವ 27 ಕೋಟಿ ರೂ. ಮೊತ್ತಕ್ಕೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಅನ್ವಯಿಸುತ್ತದೆ.

27 ಕೋಟಿ ರೂ. ಮೊತ್ತದ ಶೇ.30ರಷ್ಟು ಅಂದರೆ 8.10 ಕೋಟಿ ರೂ. ಆದಾಯ ತೆರಿಗೆ ಪಾವತಿಸಬೇಕು. ಇದರ ಮೇಲೂ ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ. ಆದಾಯ ತೆರಿಗೆ ಹಾಗೂ ಹೆಚ್ಚುವರಿ ಶುಲ್ಕದ ಮೊತ್ತದ ಮೇಲೆ ಶೇ.4ರಷ್ಟು ಉಪ ಕರವನ್ನೂ ಪಾವತಿಸಬೇಕಾಗುತ್ತದೆ. ಈ ಎಲ್ಲ ತೆರಿಗೆ ಮತ್ತು ಕಡಿತಗಳನ್ನು ಲೆಕ್ಕಹಾಕಿದ ಬಳಿಕವೇ ವಿಜೇತರಿಗೆ ಸುಮಾರು 16.47 ಕೋಟಿ ರೂ. ದೊರಕಿದೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆಯನ್ನು ಬಹುಮಾನ ವಿತರಿಸುವ ಮುನ್ನವೇ ಕಡಿತಗೊಳಿಸಲಾಗುತ್ತದೆ. ಆದರೆ ಹೆಚ್ಚುವರಿ ಶುಲ್ಕ ಮತ್ತು ಉಪ ಕರವನ್ನು ವಿಜೇತರು ಸ್ವತಃ ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ಸಮಯಕ್ಕೆ ಪಾವತಿಸದಿದ್ದರೆ ನಂತರ ತೆರಿಗೆ ಸಲ್ಲಿಸುವ ಸಂದರ್ಭದಲ್ಲಿ ಬಡ್ಡಿಯನ್ನೂ ಪಾವತಿಸಬೇಕಾಗಬಹುದು.

ತಳಿಪರಂಬದಿಂದ ಟಿಕೆಟ್ ಖರೀದಿಸಿದ್ದ ವಿಜೇತರು ಎಲ್ಲ ತೆರಿಗೆ ಹಾಗೂ ಪಾವತಿಗಳನ್ನು ಪರಿಗಣಿಸಿದ ಬಳಿಕ ಲಭಿಸುವ ಮೊತ್ತವನ್ನೇ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

Post a Comment

0 Comments

ಜಾಹೀರಾತು

Responsive Advertisement