Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆದೂರು ಬಲವಂತಡ್ಕದಲ್ಲಿ ಸಿಡಿಲು ಬಡಿದು ಯುವಕ ಮೃತ್ಯು



ಮುಳ್ಳೇರಿಯ: ಆದೂರು ಸಮೀಪದ ಬಲವಂತಡ್ಕದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಇಂದು ಮುಸ್ಸಂಜೆ ನಡೆದಿದೆ. ಕುಂಟಾರು ಸಮೀಪದ ಉಯಿತ್ತಡ್ಕ ನಿವಾಸಿ ನೌಫಲ್ (32) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಸುಮಾರು 7.30ರ ವೇಳೆಗೆ ಆದೂರು ಪಾಂಡಿ ಬಲವಂತಡ್ಕದಲ್ಲಿರುವ ಸಂಬಂಧಿಕರ ಮನೆಯ ಸಿಟ್‌ಔಟ್‌ನಲ್ಲಿ ಕುಳಿತಿದ್ದ ವೇಳೆ ನೌಫಲ್ ಅವರಿಗೆ ಸಿಡಿಲು ಬಡಿದಿದೆ. ತಕ್ಷಣ ಅವರನ್ನು ಮುಳ್ಳೇರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ನೌಫಲ್ ಅವರು ಕುಂಟಾರು ಉಯಿತ್ತಡ್ಕ ನಿವಾಸಿ ಅರಬಿಯವರ ಪುತ್ರ. ಪತ್ನಿ ಸುಹ್ರಾ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ನೌಫಲ್ ತಿರುವನಂತಪುರದಲ್ಲಿರುವ ಜ್ಯೂಸ್ ಅಂಗಡಿಯೊಂದರಲ್ಲಿ  ಉದ್ಯೋಗಿಯಾಗಿದ್ದು ರಜೆಯ ನಿಮಿತ್ತ ಊರಿಗೆ ಮರಳಿದ್ದರು.

Post a Comment

0 Comments

ಜಾಹೀರಾತು

Responsive Advertisement