Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಡುಗೆ ಮನೆಯಲ್ಲಿ ಬೆಂಕಿ ತಗುಲಿ ಗೃಹಿಣಿ ಸಾವು

ಆದೂರು : ಬೆಂಕಿಯಿಂದ ಸುಟ್ಟ ಗಾಯಗಳಾಗಿ ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಪಂಚಿಕ್ಕಲ್ ಬೆಳ್ಳಿಪ್ಪಾಡಿಯ ಬಿ.ಎಚ್. ಜಯಂತಿ (53) ಮೃತಪಟ್ಟವರು.

ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಶನಿವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಮನೆಯ ಹಿಂಭಾಗದಲ್ಲಿರುವ ಅಡುಗೆ ಮನೆಯಲ್ಲಿ ಸುಟ್ಟ ಗಾಯಗಳೊಂದಿಗೆ ಬಿದ್ದಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ತಕ್ಷಣ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಒಲೆಯಿಂದ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದ್ದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತರು ದಿ. ಕೂತ್ತಪ್ಪ ಮತ್ತು ಅಕ್ಕಮ್ಮ ದಂಪತಿಯ ಪುತ್ರಿ. ಪತಿ ರಾಧಾಕೃಷ್ಣ ಅವರು 20 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಜಯಂತಿ ಅವರಿಗೆ ಮಕ್ಕಳಿರಲಿಲ್ಲ.

ಸಹೋದರರಾದ ಗಂಗಾಧರ, ಕುಞ್ಞಣ್ಣ, ಸಹೋದರಿಯರಾದ ಸುಶೀಲಾ, ಯಶೋದಾ, ನಾಗವೇಣಿ ಅವರನ್ನು ಅಗಲಿದ್ದಾರೆ. ಅವರ ಇನ್ನೋರ್ವ ಸಹೋದರ ಸುಂದರ ಈ ಹಿಂದೆಯೇ ನಿಧನರಾಗಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement