ನೀರ್ಚಾಲ್ : ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ಸಾಮೂಹಿಕ ಐಕ್ಯದಾರ್ಢ್ಯ ಪಕ್ಷಾಚರಣೆಯ ಅಂಗವಾಗಿ ಹಾಗೂ ಆರೋಗ್ಯ ಇಲಾಖೆಯ 'ಹೆಲ್ತ್ ಕೇರಳ' ಕಾರ್ಯಕ್ರಮದ ಭಾಗವಾಗಿ ಬೇಳ ಸರ್ಕಾರಿ ಐಟಿಐಯಲ್ಲಿ ಆರೋಗ್ಯ ಜಾಗೃತಿ ತರಗತಿ ನಡೆಯಿತು.
'ಆರೋಗ್ಯ, ಶುಚಿತ್ವ ಮತ್ತು ವ್ಯಕ್ತಿತ್ವ ವಿಕಸನ' ಎಂಬ ವಿಷಯದ ಕುರಿತು ಬದಿಯಡ್ಕ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ಪೆಕ್ಟರ್ ರಾಜೇಶ್ ಕೆ. ನಂಬಿಯಾರ್ ಅವರು ತರಬೇತಿ ನೀಡಿದರು.
ಬೇಳ ಐಟಿಐಯ ತರಬೇತಿ ಅಧೀಕ್ಷಕ ಹಾಗೂ ಪ್ರಾಂಶುಪಾಲ ರಾಜೇಶ್ ಬಾಬು ಎ. ಅವರು ಸ್ವಾಗತಿಸಿ, ತರಬೇತಿ ಬೋಧಕ ಮುಹಮ್ಮದ್ ಯಾಸೀನ್ ಎಸ್.ಎಂ. ವಂದಿಸಿದರು. ಬದಿಯಡ್ಕದ ಪ್ರಥಮ ದರ್ಜೆ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಗ್ರೇಡ್ 1 ಶಿಜು ಕೆ.ಪಿ. ಅವರು ಶುಭ ಹಾರೈಸಿದರು.

0 Comments