ಮಂಗಳೂರು: ಕಾಸರಗೋಡಿನ ಕೋಟಕ್ಕಣಿ ನಿವಾಸಿ, 24 ವರ್ಷದ ಸೋನಾಲ್ ಅವರು ಮಂಗಳೂರಿನಲ್ಲಿರುವ ಬಾಡಿಗೆ ವಸತಿ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಯ ಪುತ್ರ ಸೋನಾಲ್ ಮೃತಪಟ್ಟ ಯುವಕ. ಎಂಬಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಸ್ನೇಹಿತರೊಂದಿಗೆ ಸೇರಿ ಬೆಡ್ಶೀಟ್ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು.
ಶನಿವಾರ ಸಂಜೆ ಸ್ನೇಹಿತರು ಹೊರಗೆ ತೆರಳಿದ್ದ ಸಂದರ್ಭದಲ್ಲಿ ವಾಸ್ತವ್ಯದ ಕೊಠಡಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 9 ಗಂಟೆಗೆ ಕುಟುಂಬಸ್ಥರಿಗೆ ಸೋನಾಲ್ ಮೃತಪಟ್ಟಿರುವ ಮಾಹಿತಿ ಲಭಿಸಿದೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಭಾನುವಾರ ಮಧ್ಯಾಹ್ನದ ನಂತರ ಕೋಟೆಕ್ಕಣಿಯಲ್ಲಿರುವ ಮನೆ ಬಳಿ ಅಂತ್ಯಸಂಸ್ಕಾರ ನಡೆಯಿತು.
ಮೃತರು ಸಹೋದರಿಯರಾದ ಶಾಲಿನಿ ಮತ್ತು ಸ್ನೇಹ ಅವರನ್ನು ಅಗಲಿದ್ದಾರೆ.

0 Comments