ಕಾಸರಗೋಡು: ಸ್ಕೂಟರ್ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಪ್ರವಾಸಿ ಚೆಂಬರಿಕ್ಕ ಕುನ್ನಿಲ್ ಹೌಸ್ನ ಕೆ.ಎ. ಮುಹಮ್ಮದ್ ಕುಂಜಿ (61) ಮೃತಪಟ್ಟಿದ್ದಾರೆ.
ಈ ತಿಂಗಳ 13ರಂದು ಸಂಜೆ ಮೇಲ್ಪರಂಬ್–ಚೆಂಬರಿಕ್ಕ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಮುಹಮ್ಮದ್ ಕುಂಜಿ ಅವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಮೃತರು ದಿವಂಗತ ಕೆ. ಅಹಮದ್ ಮತ್ತು ಆಸಿಯಾಬಿ ದಂಪತಿಯ
ಪುತ್ರ. ಪತ್ನಿ ರಹ್ಮತ್ ಬೀವಿ. ಮಕ್ಕಳಾದ ಕೆ.ಎಂ. ಅಹಮದ್ ಹನೀಫ್, ಕೆ.ಎಂ. ಇಬ್ರಾಹಿಂ ಬಾದುಷಾ ಮತ್ತು ಸಾಹಿದ್ ಮುಬಾರಕ್. ಸೊಸೆಯಂದಿರು ಅರ್ಷೀನಾ ಮತ್ತು ಆಸಿಯಾ. ಸಹೋದರ ಅಬ್ದುಲ್ಲಾ ಹಾಗೂ ದಿವಂಗತ ದೈನಬಿ.

0 Comments