ಮೈಸೂರು : ರಜತ ವರ್ಷಾಚರಣೆಯಲ್ಲಿರುವ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ವಿದ್ಯಾರ್ಥಿಗಳಿಂದ ಮೈಸೂರು ದಸರಾ ಉತ್ಸವದ ಅಂಗವಾಗಿ ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ ನೃತ್ಯಾರ್ಪಣಂ ಕಾರ್ಯಕ್ರಮ ಜರುಗಿತು. ಸಂಸ್ಥೆಯ ವಿದ್ಯಾರ್ಥಿನಿಯರಾದ ವಿದುಷಿ ಹರ್ಷಿತ ಬದಿಯಡ್ಕ, ವಿದುಷಿ ಅಭಿಜ್ಞಾ ಕೊಳ್ತಿಗೆ, ಕು. ಭಾರ್ಗವಿ ಬಾಯಾರು, ಕುಪ್ರತೀಕ ರೈ ಕುಂಬ್ದಾಜೆ, ಕು. ವೈಷ್ಣವೀ ಬದಿಯಡ್ಕ, ಡಾ. ಅರ್ಪಿತಾ ಮುಳ್ಳೆರಿಯ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುಷ್ಪಾಂಜಲಿ ಹಾಗೂ ಗಣೇಶ ಸ್ತುತಿಯೊಂದಿಗೆ ಮೊದಲ್ಗೊಂಡು ಶಿವಸ್ತುತಿ, ದೇವಿ ಸ್ತುತಿ ತುಳುನಾಡಿನ ವರ್ಣನೆ ಇರುವ ನೃತ್ಯ ಹಾಗೂ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


0 Comments