ಕಾಸರಗೋಡು : ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಮತ್ತು ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕಾಸರಗೋಡು ಜಂಟಿ ವತಿಯಿಂದ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಕಾಸರಗೋಡು ದಸರಾ 2026 ಕಾರ್ಯಕ್ರಮ ವಿಶಿಷ್ಟವಾಗಿ ಜರುಗಿತು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ತದಂಗವಾಗಿ ನಡೆದುವು. ಕಾಸರಗೋಡಿನ ಖ್ಯಾತ ದಂತವೈದ್ಯೆ ಡಾ.ಮಾಮಹೇಶ್ವರಿ ಸಮಾರಂಭವನ್ನು ಉದ್ಘಾಟಿಸಿದರು. ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ವ್ಯವಸ್ಥಾಪಕ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ 2026 ದಾಖಲೆ ಮಾಡಿದ ಪ್ರತಿಭೆ ಮಿನ್ಹಾ ಎಂ, ಕಾಸರಗೋಡು ನಗರಸಭೆಯ 33ನೇ ವಾರ್ಡ್ ಹಸುರು ಕ್ರಿಯಾ ಸೇನೆಯ ಸಿಬ್ಬಂದಿ ತುಳಸಿ, ವೀಣಾ, ಅಜಿತಾ, ರಾಜಶ್ರೀ ಅವರಿಗೆ ದಸರಾ ಗೌರವಾರ್ಪಣೆ ನಡೆಯಿತು. ಕಾಸರಗೋಡು ನಗರಸಭೆಯ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ ಮತ್ತು ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಇದರ ಸಂಚಾಲಕ ಕೆ.ಗುರುರಾಜ್ ಮುಖ್ಯ ಅತಿಥಿಯಾಗಿದ್ದರು. ವೆಂಕಟ್ರಮಣ ಬಾಲಗೋಕುಲದ ಮಕ್ಕಳು ವಂದೇ ಮಾತರಂ ಹಾಡಿದರು. ಕೋಟೆಕಣಿ ಶ್ರೀ ರಾಮನಾಥ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕೆ. ಎಸ್.ವಿ.ಟಿ. ವಂದಿಸಿದರು. ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಇವರಿಂದ ಸಾಂಸ್ಕೃತಿಕ ಕಲಾ ವೈಭವ ಮತ್ತು ಕಲಾವಿದರ ಕಲರವ ನಡೆಯಿತು.
.jpeg)

0 Comments