Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಹಿಳಾ ಚೆಸ್ ಪಂದ್ಯಾಟ : ಗಾನಸಮೃದ್ಧಿ ಕಾನಕಜೆ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬದಿಯಡ್ಕ : ರಾಜಸ್ಥಾನದಲ್ಲಿ ಜರಗಿದ ಪಶ್ಚಿಮ ವಲಯ ಅಂತರ್ ವಿಶ್ವವಿದ್ಯಾನಿಲಯದ ಮಹಿಳಾ ಚೆಸ್ ಪಂದ್ಯಾಟದಲ್ಲಿ ಗಾನಸಮೃದ್ಧಿ ಕಾನಕಜೆ ಭಾಗವಹಿಸಿದ ತಂಡವು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಅಕ್ಟೋಬರ್ 12ರಿಂದ 16ರ ತನಕ ನಡೆದ ಈ ಪಂದ್ಯಾಟದಲ್ಲಿ ರಾಜಸ್ಥಾನ ಗುಜರಾತ್ ಗೋವಾ ಮತ್ತು ಮಹಾರಾಷ್ಟ್ರದ 53 ವಿಶ್ವವಿದ್ಯಾನಿಲಯಗಳ ತಂಡಗಳು ಪ್ರತಿನಿಧೀಕರಿಸಿದ್ದವು. 

ಪ್ರಸ್ತುತ ಸಾವಿತ್ರಿ ಭಾ ಫುಲೆ ಪುಣೆ ಯುನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಗಾನಸಮೃದ್ಧಿ  ಏತಡ್ಕ ಕಾನಕಜೆಯ ಗೋಪಾಲಕೃಷ್ಣ ಭಟ್ ಮತ್ತು ಕುಂಬ್ಡಾಜೆ ಗ್ರಾಮಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷೆ ನಯನ ದಂಪತಿಗಳ ಪುತ್ರಿ.

Post a Comment

0 Comments

ಜಾಹೀರಾತು

Responsive Advertisement