ಬದಿಯಡ್ಕ : ಪ್ರತಿ ವಾರ್ಡಿನ ಶುಚಿತ್ವ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಮಹತ್ವ ನೀಡಿ ಸರಕಾರ ಜಾರಿಗೊಳಿಸಿದ ಮಹತ್ತರವಾದ ಯೋಜನೆಯೊಂದು ಇದೀಗ ಅಧಿಕೃತ ವರ್ಗದ ನಿರ್ಲಕ್ಷ್ಯದಿಂದ ನಾಡಿಗೆ ಮಾರಕವಾಗುತ್ತಿರುವ ಘಟನೆಯೊಂದು ವರದಿಯಾಗಿದೆ. ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಡಿಕ್ಕಾನ ಶಾಲೆ ಸಮೀಪ ಹರಿತಕರ್ಮ ಕಾರ್ಯಕರ್ತರ ಉಪಯೋಗಕ್ಕಾಗಿ ನಿರ್ಮಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕೇಂದ್ರ ಮಿನಿ ಎಂಸಿಎಫ್ ಇದೀಗ ತುಂಬಿ ತುಳುಕುತ್ತಿದ್ದು ಇದರಿಂದ ಹೊರ ಚೆಲ್ಲುವ ಉಪೇಕ್ಷಿತ ವಸ್ತುಗಳು ಇದೀಗ ಪರಿಸರದಲ್ಲೆಡೆ ಹರಡುತ್ತಿದ್ದು ಅಧಿಕೃತರು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆಂದು ನಾಗರಿಕರು ದೂರಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆಯೇ ಇದನ್ನು ಸ್ಥಾಪಿಸಿದ್ದರೂ ಇದರೊಳಗೆ ತುಂಬಿಸಿದ ತ್ಯಾಜ್ಯ ತೆರವುಗೊಳಿಸುವಲ್ಲಿ ಅಧಿಕೃತರು ಮೀನಮೇಷ ಎಣಿಸುತ್ತಿರುವುದು ಯಾಕೆಂಬುದು ಇದೀಗ ನಾಗರಿಕರ ಒಕ್ಕೊರಲಿನ ಪ್ರಶ್ನೆ.


0 Comments