Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬದಿಯಡ್ಕ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತರಿಗೆ ಸ್ಕೂಟರ್ ಓಡಿಸಲು ನೀಡಿದ ಮೂವರು ತಾಯಂದಿರ ವಿರುದ್ಧ ಕೇಸು

ಬದಿಯಡ್ಕ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸ್ಕೂಟರ್ ಓಡಿಸಲು ನೀಡಿದ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೆಲ್ಲಿಕಟ್ಟೆ ಸಮೀಪದ ಎರ್ಪಕಟ್ಟೆಯ  15 ವರ್ಷದ ಬಾಲಕ ಸ್ಕೂಟರ್ ಚಲಾಯಿಸುತ್ತಿದ್ದಾಗ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ಬಾಲಕನ ತಾಯಿ ಚರ್ಲಡ್ಕದ ಆಯಿಷಾ (47) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬದಿಯಡ್ಕದಿಂದ ಚೆರ್ಲಡ್ಕದ ಕಡೆಗೆ 16 ವರ್ಷದ ಬಾಲಕ ಸ್ಕೂಟರ್ ಚಲಾಯಿಸುತ್ತಿದ್ದಾಗ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಾಯಿ ಹಾಗೂ ವಾಹನದ ಆರ್.ಸಿ. ಮಾಲಕಿ ನೆಕ್ರಾಜೆ ಚೆರ್ಲಡ್ಕದ ಖದೀಜಾ (37) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅದೇ ರೀತಿ ಮಾನ್ಯದಿಂದ ಚರ್ಲಡ್ಕದ ಕಡೆಗೆ 17 ವರ್ಷದ ಬಾಲಕ ಸ್ಕೂಟರ್ ಚಲಾಯಿಸುತ್ತಿದ್ದಾಗ ಪತ್ತೆಯಾಗಿದ್ದು, ಆತನ ತಾಯಿ ಬೋವಿಕ್ಕಾನದ ಬಾಲನಡ್ಕದ ಶಹರ್ ಬಾನ್ (44) ವಿರುದ್ಧವೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments

ಜಾಹೀರಾತು

Responsive Advertisement