Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆರಿಕ್ಕಾಡಿ ಟೋಲ್ ಪ್ಲಾಜಾ ಬಳಿ ಬೊಲೆರೊ ಪಿಕಪ್ ಇನ್ಸುಲೇಟರ್ ವಾಹನದಿಂದ 1,062 ಲೀಟರ್ ನಕಲಿ ಮದ್ಯದೊಂದಿಗೆ ಆರೋಪಿ ಬಂಧನ


 


ಕುಂಬಳೆ :  ಆರಿಕ್ಕಾಡಿ ಟೋಲ್ ಪ್ಲಾಜಾ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1,062 ಲೀಟರ್ ನಕಲಿ ಮದ್ಯವನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆ್ಯಂಡ್ ಆ್ಯಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ವಶಪಡಿಸಿಕೊಂಡಿದ್ದು, ವಾಹನದ ಚಾಲಕನನ್ನು ಬಂಧಿಸಿದೆ.

ಅಕ್ಟೋಬರ್ 25ರ ಭಾನುವಾರ ಮುಂಜಾನೆ ಸುಮಾರು 3.10ರ ವೇಳೆಗೆ ಆರಿಕ್ಕಾಡಿ ಟೋಲ್ ಪ್ಲಾಜಾದಿಂದ ಸುಮಾರು 30 ಮೀಟರ್ ದಕ್ಷಿಣಕ್ಕೆ, ಮಂಗಳೂರು–ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಪೂರ್ವಭಾಗದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.


ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ. ವಿ. ಅವರ ನೇತೃತ್ವದ ತಂಡವು ಕೆಎಲ್ 13 ಎಎಸ್ 2152 ನೋಂದಣಿ ಸಂಖ್ಯೆಯ ಬೊಲೆರೊ ಪಿಕಪ್ ಇನ್ಸುಲೇಟರ್ ವಾಹನವನ್ನು ತಪಾಸಣೆ ನಡೆಸಿದಾಗ, ಅಕ್ರಮವಾಗಿ ಸಾಗಿಸುತ್ತಿದ್ದ ನಕಲಿ ಮದ್ಯ ಪತ್ತೆಯಾಗಿದೆ. ಒಟ್ಟು 123 ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ 180 ಮಿ.ಲೀ. ಸಾಮರ್ಥ್ಯದ 5,904 ಬಾಟಲಿಗಳಲ್ಲಿದ್ದ 1,062.72 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಕಾಸರಗೋಡು ತಾಲೂಕಿನ ತೆಕ್ಕಿಲ್ ವಿಲೇಜ್‌ನ ಚಟ್ಟಂಚಾಲ್ ಪುತ್ತರಿಯಡ್ಕಂ ನಿವಾಸಿ ಹಮೀದ್ ಅವರ ಪುತ್ರ ಸಲೀಂ ಸಿ. ಎಚ್. (37) ಎಂಬಾತನನ್ನು ಬಂಧಿಸಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಶಪಡಿಸಿಕೊಂಡ ಮದ್ಯ, ವಾಹನ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಗೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಸಿ. ಕೆ. ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್ ಪ್ರಸಾದ್ ಎಂ. ಎಂ., ಗ್ರೇಡ್ ಪ್ರಿವೆಂಟಿವ್ ಆಫೀಸರ್ ರೀನಾ ವಿ., ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ಪ್ರಶಾಂತ್ ಕುಮಾರ್, ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮೋಹನ್ ಕುಮಾರ್ ಎಲ್., ಪ್ರಿಷಿ (ಸೈಬರ್ ಸೆಲ್), ವಿಪಿನ್ ಕುಮಾರ್ ಹಾಗೂ ಸಿವಿಲ್ ಎಕ್ಸೈಸ್ ಅಧಿಕಾರಿ ಮತ್ತು ಚಾಲಕ ಡಿಜಿತ್ ಪಾಲ್ಗೊಂಡಿದ್ದರು.

Post a Comment

0 Comments

ಜಾಹೀರಾತು

Responsive Advertisement