Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬದಿಯಡ್ಕದಲ್ಲಿ ಕುಟು ಕುಟು ಜೂಜಾಟ : ಏಳು ಮಂದಿ ಬಂಧನ

ಬದಿಯಡ್ಕ : ಕುಟು ಕುಟು ಜೂಜಾಟದಲ್ಲಿ ತೊಡಗಿದ್ದ ಏಳು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು, ಅವರಿಂದ ₹1,580 ನಗದನ್ನು ವಶಪಡಿಸಿಕೊಂಡಿದ್ದಾರೆ.

ಪೆರ್ಲ ನಲ್ಕದ ದಿನೇಶ್ (42), ಕೊಟ್ಟೂರು ಪಾತನಡ್ಕದ ರಾಜು (35), ನೆಕ್ರಾಜೆ ಅರ್ಲಡ್ಕದ ರಾಜೇಶ್ (40), ಅರ್ಲಡ್ಕ ಕೊಪ್ಪಳ ಕೊಚ್ಚಿಯ ಬಾಬು(67), ಕುಂಬ್ಡಾಜೆ ಮವ್ವಾರಿನ ಸುಂದರ (60), ಮಾರ್ಪನಡ್ಕದ ಜಯೇಶ್ (45) ಮತ್ತು ನೆಟ್ಟಣಿಗೆ ಸಂಕತ್ತಡ್ಕದ ಮುರಳೀಧರ (53) ಬಂಧಿತರು.

ಬದಿಯಡ್ಕ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಟಿ. ಸುನಿಲ್ ಕುಮಾರ್ ಅವರಿಗೆ ನಿನ್ನೆ ಸಂಜೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಪೈಕ ಸಮೀಪದ ಅರ್ಲಡ್ಕ ಕೊಪ್ಪಳ ಕೊಚ್ಚಿಯ ಜನವಸತಿಯಿಲ್ಲದ ಜಾಗದಲ್ಲಿ ಜೂಜಾಟದಲ್ಲಿ ತೊಡಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಕರಣ ದಾಖಲಿಸಿ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು  ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

Post a Comment

0 Comments

ಜಾಹೀರಾತು

Responsive Advertisement