ಕ್ವಿಟೊ: ಚರ್ಚ್ನಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಬೃಹತ್ ಶಿಲುಬೆ ತಲೆಯ ಮೇಲೆ ಬಿದ್ದು ಧರ್ಮಗುರು ಮೃತಪಟ್ಟ ದಾರುಣ ಘಟನೆ ದಕ್ಷಿಣ ಅಮೆರಿಕದ ಈಕ್ವೆಡಾರ್ನ ಗ್ವಾಯಾಕ್ವಿಲ್ನಲ್ಲಿರುವ ಚರ್ಚ್ನಲ್ಲಿ ನಡೆದಿದೆ. ಚರ್ಚ್ನ ಧರ್ಮಗುರು ಫಾದರ್ ಪ್ಯಾಟ್ರಿಸಿಯೊ ಆಲ್ಫ್ರೆಡೊ ಸಾಂಚೆಝ್ ಮೊಲಿನಾರಿ ಮೃತಪಟ್ಟವರು. ಅಕ್ಟೋಬರ್ 17ರ ಶನಿವಾರ ಈ ಅಪಘಾತ ಸಂಭವಿಸಿದೆ.
ಧರ್ಮಗುರು ಬಲಿಪೀಠದ ಬಳಿ ನಿಂತು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಅವರ ಹಿಂದಿನ ಗೋಡೆಗೆ ಅಳವಡಿಸಲಾಗಿದ್ದ ಬೃಹತ್ ಶಿಲುಬೆ ಏಕಾಏಕಿ ಕಳಚಿ ಅವರ ತಲೆಯ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಧರ್ಮಗುರು ಮೃತಪಟ್ಟಿದ್ದಾರೆ.
ಚರ್ಚ್ನಲ್ಲಿ ನಡೆಯುತ್ತಿದ್ದ ಪೂಜೆಯ ನೇರ ಪ್ರಸಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿತ್ತು. ಹೀಗಾಗಿ ಶಿಲುಬೆ ಕುಸಿದು ಬಿದ್ದ ಘಟನೆಯ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

0 Comments