Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲದಲ್ಲಿ ‘ಅಭಯ್ ರಾಜ್ ಅಪಾರ್ಟ್‌ಮೆಂಟ್’ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭ


ಪೆರ್ಲ: ಯುವ ಉದ್ಯಮಿ ರಾಜೇಶ್ ಬಜಕೂಡ್ಲು ಅವರ ಮಾಲಕತ್ವದಲ್ಲಿ ಪೆರ್ಲದ ಆರ್.ಎಸ್. ಗ್ರೌಂಡ್‌ನಲ್ಲಿ ನೂತನವಾಗಿ ನಿರ್ಮಿಸಲಾದ ‘ಅಭಯ್ ರಾಜ್ ಅಪಾರ್ಟ್‌ಮೆಂಟ್’ನ ಶುಭಾರಂಭ ಸಮಾರಂಭವು ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಿತು.


ನೂತನ ಕಟ್ಟಡದ ಉದ್ಘಾಟನೆಯ ಅಂಗವಾಗಿ ಗೋಪಾಲಕೃಷ್ಣ ಅಡಿಗ ಅಮೆಕ್ಕಳ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕೆ. ಅವರು ಅಪಾರ್ಟ್‌ಮೆಂಟ್‌ನ್ನು ಉದ್ಘಾಟಿಸಿ ಶುಭ ಹಾರೈಸಿದರು. 


ದೊಡ್ಡಮನೆ ಸುಣ್ಣಾಡ ತರವಾಡಿನ ಅಧ್ಯಕ್ಷ ಶಿವಪ್ಪ ಮಾಸ್ಟರ್ ಎಣ್ಮಕಜೆ 
ದೀಪ ಪ್ರಜ್ವಲನೆಗೈದರು.ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಇಂದಿನ ಕಾಲಘಟ್ಟದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಸಾಂಪ್ರದಾಯಿಕ ವಾಸ್ತು ಪರಿಕಲ್ಪನೆಗೆ ಆದ್ಯತೆ ನೀಡಿ ಕಟ್ಟಡ ನಿರ್ಮಿಸುವುದು ಮಹತ್ವದ ವಿಚಾರವಾಗಿದೆ. ಪೆರ್ಲದಂತಹ ಬೆಳೆಯುತ್ತಿರುವ ಪ್ರದೇಶದಲ್ಲಿ ಇಂತಹ ಸುಸಜ್ಜಿತ ಕಟ್ಟಡಗಳ ನಿರ್ಮಾಣವು ವಸತಿ ಸೌಲಭ್ಯಗಳ ಅಭಿವೃದ್ಧಿಗೆ ಪೂರಕವಾಗುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಯುವ ಉದ್ಯಮಿ ರಾಜೇಶ್ ಬಜಕೂಡ್ಲು ಅವರ ಪರಿಶ್ರಮದ ಸಾರ್ಥಕತೆಯನ್ನು ಶ್ಲಾಘಿಸಿದ ಅವರು, ನೂತನ ಅಪಾರ್ಟ್‌ಮೆಂಟ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಡುಪಿಯ ನಿವೃತ್ತ ಎಲ್‌ಐಸಿ ಆಡಳಿತಾಧಿಕಾರಿ ಚಂದಪ್ಪ,   ಉದ್ಯಮಿ ಪ್ರಕಾಶ್ ಶೆಟ್ಟಿ ಕುದ್ವ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಆಡಳಿತ ಮಂಡಳಿ ಸಮಿತಿಯ ಮಿತ್ತೂರು ಪುರುಷೋತ್ತಮ ಭಟ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ಯಾಮ್ ಸುಂದರ್, ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಈಶ್ವರ ನಾಯ್ಕ,ಭಾಸ್ಕರ ಪೂಜಾರಿ ಉಡುಪಿ, ನಿವೃತ್ತ ಅರಣ್ಯ ಇಲಾಖಾ ಅಧಿಕಾರಿ ಸುಂದರ ಪೂಜಾರಿ ವಾಣಿನಗರ, ರಾಧಾಕೃಷ್ಣ ಬೊಳಂತಿಮೊಗರು, ರವಿ ಬೊಳಂತಿಮೊಗರು,


ಅಪಾರ್ಟ್ ಮಾಲೀಕರಾದ ರಾಜೇಶ್ ಬಜಕೂಡ್ಲು ಅವರ ಪಿತಾಶ್ರೀ ಹಿರಿಯವರಾದ ನಾರಾಯಣ ಪೂಜಾರಿ,  ಸುನೀತಾ, ಸುರಕ್ಷಾ,ಸಾನ್ವಿ,ಸಮನ್ವಿ,ಅಭಯ್ ರಾಜ್  ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

 


ಬಳಿಕ ಅನ್ನಸಂತರ್ಪಣೆ ನಡೆಯಿತು.
ಆಧುನಿಕ ಸೌಲಭ್ಯಗಳು ಹಾಗೂ ಸಾಂಪ್ರದಾಯಿಕ ವಾಸ್ತು ಪರಿಕಲ್ಪನೆಯ ಸಮನ್ವಯದೊಂದಿಗೆ ನಿರ್ಮಾಣಗೊಂಡಿರುವ ‘ಅಭಯ್ ರಾಜ್ ಅಪಾರ್ಟ್‌ಮೆಂಟ್’ನ ಶುಭಾರಂಭವು ಪೆರ್ಲದ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಹೆಜ್ಜೆಯಾಗಿದ್ದು, ಪ್ರದೇಶದ ವಸತಿ ಸೌಲಭ್ಯಗಳಿಗೆ ಹೊಸ ಮೆರುಗು ನೀಡಿದೆ.

Post a Comment

0 Comments

ಜಾಹೀರಾತು

Responsive Advertisement